Top

ರಾಮನಗರ ಉಪಚುನಾವಣೆಗೆ ಬಿಜೆಪಿ ಮಾಸ್ಟರ್‌ ಪ್ಲಾನ್..!

ರಾಮನಗರ ಉಪಚುನಾವಣೆಗೆ ಬಿಜೆಪಿ ಮಾಸ್ಟರ್‌ ಪ್ಲಾನ್..!
X

ರಾಮನಗರ: ರಾಮನಗರ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್, ಕಾಂಗ್ರೆಸ್ ಸೇರಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಈ ಕಾರಣಕ್ಕಾಗಿ ಬಿಜೆಪಿ ಹೊಸತಂತ್ರ ರೂಪಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಶುರುಮಾಡಿದೆ.

ರಾಮನಗರ ಉಪಚುನಾವಣೆ ಸಮೀಪಿಸುತ್ತಿರುವಾಗಲೇ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್, ತಮಗೆ ಯೋಗೇಶ್ವರ್ ಸಪೋರ್ಟ್ ಸಿಕ್ಕಿಲ್ಲವೆಂಬ ಕಾರಣ ಹೇಳಿ, ಕಾಂಗ್ರೆಸ್ ಸೇರಿದ್ರು. ಇನ್ನು ಇದೆಲ್ಲ ಡಿ.ಕೆ.ಶಿವಕುಮಾರ್ ತಂತ್ರ ಎಂಬ ಮಾತು ಕೇಳಿಬಂದ್ರೂ ಕೂಡ, ಚಂದ್ರಶೇಖರ್ ತಮಗೆ ಬೆಂಬಲ ಸಿಗದ ಕಾರಣ ತಾನು ಪಕ್ಷ ಬಿಟ್ಟಿರುವುದಾಗಿ ಹೇಳಿದ್ದಾರೆ.

ಸದ್ಯ ರಾಮನಗರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಇಲ್ಲದ ಕಾರಣ, ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಚುನಾವಣೆ ಓಟಿಂಗ್ ಮಷಿನ್‌ನಲ್ಲಿ ಕ್ರಮ ಸಂಖ್ಯೆ 2ರಲ್ಲಿ ಚಂದ್ರಶೇಖರ್ ಹೆಸರಿತ್ತು. ಆದರೆ ಚಂದ್ರಶೇಖರ್ ಪಕ್ಷಕ್ಕೆ ಕೈಕೊಟ್ಟ ಪರಿಣಾಮ, ಸಮಾಜಿಕ ಜಾಲತಾಣದಲ್ಲಿ ಬಿಜೆಪಿ ಕ್ಯಾಂಪೇನ್ ಹಮ್ಮಿಕೊಂಡಿದೆ.

ಕರಪತ್ರಗಳನ್ನು ಪೋಸ್ಟ್ ಮಾಡಿ, ಬಿಜೆಪಿ ಕ್ಯಾಂಪೇನ್ ಮಾಡುತ್ತಿದ್ದು, ಕ್ರಮ ಸಂಖ್ಯೆ 2ರಲ್ಲಿ ಚಂದ್ರಶೇಖರ್ ಹೆಸರಿನ ಬದಲು, ದೇಶ ಮೊದಲು ಎಂಬ ಸ್ಲೋಗನ್ ಮುದ್ರಿಸಲಾಗಿದೆ. ಫೇಸ್‌ಬುಕ್, ವಾಟ್ಸಪ್‌ಗಳಲ್ಲಿ ಬಿಜೆಪಿ ಕರಪತ್ರ ಪೋಸ್ಟ್ ಮಾಡಿ ಕ್ಯಾಂಪೇನ್ ಮಾಡಿದೆ. ಕಮಲ ಪಕ್ಷಕ್ಕೆ ಕಮಲವೇ ಅಭ್ಯರ್ಥಿ ಎಂದು ಕರಪತ್ರ ಹೊರಡಿಸಲಾಗಿದೆ.

ಒಟ್ಟಾರೆಯಾಗಿ ರಾಮನಗರ ಚುನಾವಣಾ ಕಣದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

Next Story

RELATED STORIES