Top

ಬೆಂಗಳೂರಿನಲ್ಲಿ ಗಾಯಕಿ ವಸುಂಧರ ದಾಸ್​ಗೆ ಕ್ಯಾಬ್ ಚಾಲಕನ ಕಿರುಕುಳ

ಬೆಂಗಳೂರಿನಲ್ಲಿ ಗಾಯಕಿ ವಸುಂಧರ ದಾಸ್​ಗೆ ಕ್ಯಾಬ್ ಚಾಲಕನ ಕಿರುಕುಳ
X

ಖ್ಯಾತ ಗಾಯಕಿ‌ ವಸುಂದರಾ ದಾಸ್​ಗೆ ಕ್ಯಾಬ್ ಚಾಲಕ ಹಾಡುಹಗಲೇ ಕಿರುಕುಳ ನೀಡಿದ್ದೂ ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಹೃದಯಭಾಗವಾದ ಮಲ್ಲೇಶ್ವರದ ಮಾರ್ಗೊಸಾ ರಸ್ತೆಯಲ್ಲಿ ಅಕ್ಟೋಬರ್ 29ರಂದು ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ.

ವಸುಂದರ ದಾಸ್​, ದೇಶ ಹಾಗೂ ವಿದೇಶೀ ಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿದ್ದು, ಹಿಂದಿ, ತೆಲುಗು ಹಾಗೂ ಕನ್ನಡ ಭಾಷೆಯಲ್ಲೂ ನಟಿಸಿದ್ದಾರೆ. ಇಂದ್ರಜೀತ್ ಲಂಕೇಶ್ ನಿರ್ದೇಶಿಸಿ, ದರ್ಶನ್ ಅಭಿನಯಿಸಿದ್ದ ಲಂಕೇಶ್ ಚಿತ್ರದಲ್ಲೂ ಅವರು ನಟಿಸಿದ್ದರು.

ಇಟಿಯೋಸ್ ಕಾರು ಚಾಲಕನಿಂದ ಕೃತ್ಯ ನಡೆದಿದ್ದು, ವಸುಂಧರಾ ದಾಸ್ ತಮ್ಮ ಕಾರಿನಲ್ಲಿ ಬರುತ್ತಿದ್ದಾಗ ಭಾಷ್ಯಂ ಸರ್ಕಲ್​ನಿಂದ ಮಲ್ಲೇಶ್ವರದವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾನೆ. ಮಲ್ಲೇಶ್ವರ 18ನೇ ಕ್ರಾಸ್ ಬಳಿ ಅಡ್ಡಗಟ್ಟಿದ ಚಾಲಕ ವಸುಂಧರಾ ಅವರ ಕಾರಿನ ಬಾಗಿಲು ತೆರೆಯಲು ಯತ್ನಿಸಿದ್ದಾನೆ.

ವಸುಂಧರ ದಾಸ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದ್ದಾನೆ. ಈ ಸಂದರ್ಭದಲ್ಲಿ ಟ್ರಾಫಿಕ್ ಹೆಚ್ಚಾಗಿ ವಿಚಾರಿಸಲು ಸ್ಥಳೀಯರು ಆಗಮಿಸಿದಾಗ ಕೂಡಲೇ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಈ ಸಂಬಂಧ ವಸುಂಧರಾ ದಾಸ್ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ 509, 341, 354 ಮತ್ತು 504ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರಿಂದ ಇಟಿಯೋಸ್ ಕಾರು ಚಾಲಕನಿಗಾಗಿ ಶೋಧ ನಡೆದಿದೆ.

Next Story

RELATED STORIES