ಕನ್ನಡದ ಬಗ್ಗೆ ಸವಾಲು ಹಾಕಿ ಸಿದ್ದರಾಮಯ್ಯ ಕನ್ನಡಿಗರಿಗೆ ಅಪಮಾನ: ಶ್ರೀರಾಮುಲು

ಕನ್ನಡದ ಭಾಷೆಯ ಬಳಕೆ ಬಗ್ಗೆ ಟೀಕಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಡೀ ಕನ್ನಡಿಗರಿಗೆ ಅದರಲ್ಲೂ ಬಳ್ಳಾರಿಯ ಜನರಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಆರೋಪಿಸಿದ್ದಾರೆ.
ಬಳ್ಳಾರಿಯ ಮೋಳಕಾಲೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಿನ ಭಯದಿಂದ ಮೈತ್ರಿ ಸರಕಾರ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.
ಕಾಂಗ್ರೆಸ್ ನಾಟಕೀಯ ಭಾಷೆ ಬಳಸಿದರೂ ಕೂಡ ಜನರು ನಮ್ಮ ಕೈ ಬಿಡಲ್ಲ. ಸಚಿವ ಡಿ.ಕೆ. ಶಿವಕುಮಾರ್ ಹತ್ತಿರ ಸಾಕಷ್ಟು ದುಡ್ಡು ಇರಬಹುದು. ಆದರೆ ದುಡ್ಡಿಗೆ ನಮ್ಮ ಜನ ಮಾರಾಟವಾಗುವುದಿಲ್ಲ ಸೋನಿಯಾ ಗಾಂಧಿ ಅವರು ಅಮೇಥಿ ಉಳಿಸಿಕೊಂಡು ಬಳ್ಳಾರಿಗೆ ರಾಜೀನಾಮೆ ನೀಡಿದರು. ಅಂದಿನಿಂದ ಸೋನಿಯಾ ಗಾಂಧಿ ಕೂಡ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು.
ಅಧಿಕಾರ ಯಂತ್ರ ದುರುಪಯೋಗ ಮಾಡಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವ ಕೆಲಸ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ್ದಾರೆ. ರಾಮನಗರ ಅಭ್ಯರ್ಥಿ ಚಂದ್ರಶೇಖರ ಮೇಲೆ ಒತ್ತಡ ತಂದು ಕಣದಿಂದ ವಾಪಸ್ಸು ಆಗುವಂತೆ ಮಾಡಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡುವಂತಹ ಕೆಲಸ ಮೈತ್ರಿ ಸರ್ಕಾರ ಮಾಡಿದೆ. ಹಿಂದುಳಿದ ಸಮಾಜವನ್ನು ತುಳಿಯುವ ಕೆಲಸ ಕಾಂಗ್ರೇಸ್ ಮಾಡಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು,
ಕಾಂಗ್ರೆಸ್ ಸೋಲಿನ ಭೀತಿಯಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಷ್ಟು ಬುದ್ದಿವಂತ ನಾನಲ್ಲ. ಈ ಭಾಗದ ಕನ್ನಡದ ಭಾಷೆಗೆ ಕಾಂಗ್ರೆಸ್ ಪಕ್ಷದ ನಾಯಕರು ಸಿದ್ದರಾಮಯ್ಯ ಅಪಮಾನ ಮಾಡ್ತಿದ್ದಾರೆ. ಸಿದ್ದರಾಮಯ್ಯ ನನ್ನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. 122 ಮಂದಿ ಶಾಸಕರು ಕಳೆದ ಸರ್ಕಾರದಲ್ಲಿದೆ ಆದರೆ ಈಗ 78 ಶಾಸಕರಿದ್ದಾರೆ. ಅಧಿಕಾರಕ್ಕಾಗಿ ಅಪ್ಪ ಮಕ್ಕಳ ಕಾಟವನ್ನು ಕಾಂಗ್ರೆಸ್ ನವರು ಸಹಿಸಿಕೊಳ್ಳುತ್ತೀದ್ದಾರೆ ಎಂದರು.
ದೇಶದಿಂದ. ರಾಜ್ಯದಿಂದ ಬಳ್ಳಾರಿ ಬೇರ್ಪಡಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜಾತಿ- ಜಾತಿಗಳ ಮಧ್ಯ ಜಗಳ ಹಚ್ಚಿ ಒಡೆದಾಡುಳುವ ಸಂಸ್ಕ್ರತಿ ಸಿದ್ದರಾಮಯ್ಯ ಅವರದ್ದು. ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ತಪ್ಪಿನಿಂದ ವಿವಾದ ಆಗಿದೆ. ಸಿದ್ದರಾಮಯ್ಯ ಗೆ ಪಾಪ ಪ್ರಜ್ಞೆ ಕಾಡುತ್ತೀದೆ. ಬಳ್ಳಾರಿ ಲೋಕಸಭಾ ಉಪಚುನಾವಣೆ ಸ್ವಾಭಿಮಾನದ ಚುನಾವಣೆ. ಜ್ಯೋತಿಷರು ಹೇಳಿದ ಕಾರಣ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಬಳ್ಳಾರಿ ಜನತೆ ಶಾಂತಾರಿಗೆ ಆಶೀರ್ವಾದ ಮಾಡುತ್ತಾರೆ ಎನ್ನೋವ ವಿಶ್ವಾಸವಿದೆ ಎಂದರು.