Top

ಹುಂಡಿಯಲ್ಲಿ ಹಣ ಸಂಗ್ರಹ: ಚಾಮುಂಡಿಯನ್ನು ಮೀರಿಸಿದ ಮಲೆ ಮಾದೇಶ್ವರ!

ಹುಂಡಿಯಲ್ಲಿ ಹಣ ಸಂಗ್ರಹ: ಚಾಮುಂಡಿಯನ್ನು ಮೀರಿಸಿದ ಮಲೆ ಮಾದೇಶ್ವರ!
X

ನಂಜನಗೂಡಿನ ಮಲೆ ಮಹದೇಶ್ವರ ದೇವಸ್ಥಾನದ ಹುಡಿಯಲ್ಲಿ ಈ ಬಾರಿ 1.5 ಕೋಟಿ ರೂ. ಸಂಗ್ರಹವಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯನ್ನು ಈ ವಿಷಯದಲ್ಲಿ ಮಲೆ ಮಹದೇಶ್ವರ ಹಿಂದಿಕ್ಕಿದ್ದಾರೆ.

ಚಾಮರಾಜನಗರ ಮಲೆ ಮಹದೇಶ್ವರ ದೇವಾಲಯದ ನಡೆದಿದ್ದ ಹುಂಡಿಗೆ ಬಿದ್ದ ಹಣದ ಎಣಿಕೆ ಕಾರ್ಯ ಬುಧವಾರ ಮುಕ್ತಾಯವಾಯಿತು. 1.5 ಕೋಟಿ ರೂ. ನಗದು, 1.5 ಕೆ.ಜಿ. 45 ಗ್ರಾಂ ಚಿನ್ನಾಭರಣ ಹಾಗೂ 1.5ಕೆಜಿ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಬುಧವಾರ ಸತತ 13 ಗಂಟೆಗಳ ಕಾಲ 450 ಸಿಬ್ಬಂದಿ ಹುಂಡಿ ಎಣಿಕೆ ನಡೆಸಿದರು.

ಈ ಬಾರಿ ದಸರಾ ಹಬ್ಬ ಇದ್ದಿದ್ದರಿಂದ ಚಾಮುಂಡಿ ಬೆಟ್ಟದಲ್ಲಿ 1.27 ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ಬಾರಿಗಿಂತ 7 ಲಕ್ಷ ರೂ. ಹೆಚ್ಚು ಆದಾಯ ಬಂದಿತ್ತು. ಆದರೆ ಈ ಬಾರಿ ಚಾಮುಂಡಿ ದೇವಸ್ಥಾನದ ಆದಾಯವನ್ನು ಮಲೆ ಮಹದೇಶ್ವರ ಹಿಂದಿಕ್ಕಿದ್ದಾರೆ.

Next Story

RELATED STORIES