ಪ್ರಧಾನಿ ಮೋದಿ ವಿರುದ್ಧ ಕೆಳಮಟ್ಟದ ಟ್ವೀಟ್ ಮಾಡಿದ ರಮ್ಯಾ..!

X
TV5 Kannada1 Nov 2018 7:39 AM GMT
ಪದೇ ಪದೇ ಟ್ವೀಟ್ ಮೂಲಕ ಪ್ರಧಾನಿ ಮೋದಿಯನ್ನ, ಬಿಜೆಪಿ ನಾಯಕರನ್ನ ಕೆಣಕುತ್ತಿರುವ ರಮ್ಯಾ, ಇದೀಗ ಹೊಸ ಟ್ವೀಟ್ ಮಾಡುವ ಮೂಲಕ ಮತ್ತೆ ಬಿಜೆಪಿಗರನ್ನು ಕೆಣಕಿದ್ದಾರೆ. ನಿನ್ನೆ ಸರ್ದಾರ್ ವಲ್ಲಭಬಾಯಿ ಪ್ರತಿಮೆ ಅನಾವರಣಗೊಂಡ ನಂತರ ಅದರ ಪಾದದ ಬಳಿ ಪ್ರಧಾನಿ ಮೋದಿ ನಿಂತಿದ್ದ ಫೋಟೋವೊಂದನ್ನ ಅಪ್ಲೋಡ್ ಮಾಡಿ, ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಅವಹೇಳನಕಾರಿ ಟ್ವೀಟ್ ಮಾಡಿದ್ದು, ಬಿಜೆಪಿ ಕಾರ್ಯಕರ್ತರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಮ್ಯಾ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ವಿರುದ್ಧ ಮತ್ತು ಮೋದಿ ವಿರುದ್ಧ ಟ್ವೀಟ್ ಮಾಡುತ್ತಿದ್ದು, ಮೋದಿ ಚೋರ್ ಹೈ ಎಂದೆಲ್ಲ ಟ್ವೀಟ್ ಮಾಡಿದ್ದರು. ಇದೀಗ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಬಾಯಿ ಪ್ರತಿಮೆ ಪಾದದ ಬಳಿ ನಿಂತ ಫೋಟೋವೊಂದನ್ನ ಅಪ್ಲೋಡ್ ಮಾಡಿ, ಮೋದಿ ಹಕ್ಕಿಯ ಅವಶೇಷನಾ ಎಂದು ಟ್ವೀಟ್ ಮಾಡಿದ್ದಾರೆ.
Next Story