Top

ರಾಜಕುಮಾರ ಚಿತ್ರತಂಡದ ಹೊಸ ಚಿತ್ರ `ಯುವರತ್ನ'

ರಾಜಕುಮಾರ ಚಿತ್ರತಂಡದ ಹೊಸ ಚಿತ್ರ `ಯುವರತ್ನ
X

ಪುನೀತ್ ರಾಜ್​ಕುಮಾರ್​ಗೆ ಭಾರೀ ಹೆಸರು ತಂದುಕೊಟ್ಟ ರಾಜಕುಮಾರ ಚಿತ್ರ ತಂಡ ಕೈಗೆತ್ತಿಕೊಂಡಿರುವ ಎರಡನೇ ಚಿತ್ರದ ಟೈಟಲ್ ಅನ್ನು ನವೆಂಬರ್ 1 ರಾಜ್ಯೋತ್ಸವ ದಿನವಾದ ಗುರುವಾರ ಬಿಡುಗಡೆ ಮಾಡಲಾಯಿತು.

ಪುನೀತ್ ರಾಜ್ ಕುಮಾರ್ ಅಭಿನಯಿಸಿ, ಸಂತೋಷ್ ಆನಂದ್​ ರಾಮ್ ನಿರ್ದೇಶಿಸಿ ಮತ್ತು ಹರಿಕೃಷ್ಣ ಸಂಗೀತ ನಿರ್ದೇಶಕ ಮೂವರ ಕಾಂಬಿನೇಷನ್​ನಲ್ಲಿ ಬರುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಯುವರತ್ನ ಎಂದು ನಾಮಕರಣ ಮಾಡಲಾಗಿದೆ.

ಮನೆಮಗ ಅಂದರೆ ಹೇಗಿರಬೇಕು ಎಂಬ ಕಥೆಯ ಎಳೆಯನ್ನು ಹೊಂದಿರುವ ಈ ಚಿತ್ರದ ಟೈಟಲ್ ಅನ್ನು ಇಬ್ಬರು ವಿಕಲಚೇತನ ಮಕ್ಕಳಿಂದ ಬೆಂಗಳೂರಿನ ಕಾವೇರಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.

ಪುನೀತ್ ರಾಜ್​ಕುಮಾರ್ ಅವರ 29ನೇ ಚಿತ್ರವಾದ 'ಯುವರತ್ನ' ಚಿತ್ರದ ಟೈಟಲ್ ಅನ್ನು ಚಾಮರಾಜನಗರದ ವಿನೂತಾ, ಮಹಶ್ರೀ ಬಿಡುಗಡೆ ಮಾಡಿದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಂತೋಷ್, ಈ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ 16 ವರ್ಷದ ನಂತರ ಪುನೀತ್ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದರು.

Next Story

RELATED STORIES