Top

ಉಗ್ರಪ್ಪ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯ ಆರೋಪ..!

ಉಗ್ರಪ್ಪ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯ ಆರೋಪ..!
X

ಬೆಂಗಳೂರು: ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ, ಮಹಿಳಾ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಸಮಿತಿ ಅಧ್ಯಕ್ಷ, ವಿ.ಎಸ್.ಉಗ್ರಪ್ಪ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೇಲ್‌ನಲ್ಲಿ ಸುದ್ದಗೋಷ್ಠಿ ನಡೆಸಿ ಮಾತನಾಡಿದ ಮಾಯಾಸಿಂಗ್, 2014 ಫೆಬ್ರುವರಿಯಿಂದ ನವೆಂಬರ್ 16ರವರೆಗೆ ನನ್ನ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಆಕೆಯ ಮೇಲೆ ದೌರ್ಜನ್ಯ ನಡೆಸಿದವನುನಮ್ಮ ನಾದಿನಿಯ ಮಗ. ಮೂರು ವರ್ಷದಿಂದ ಕೇಸ್ ನಡೆಯುತ್ತಿದೆ. ಉಗ್ರಪ್ಪ ಮಹಿಳಾ ದೌರ್ಜನ್ಯ ಸಮಿತಿ ಅಧ್ಯಕ್ಷರಾಗಿದ್ದರು, ಆಗ ನಾನು ಅವರ ಬಳಿ ಸಮಸ್ಯೆ ಹೇಳಿಕೊಂಡಿದ್ದೆ. ಆಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಪೊಲೀಸ್, ವಕೀಲರ ಜೊತೆ ಮಾತನಾಡಿ ಸಪೋರ್ಟ್ ಮಾಡಿದ್ದರು. ಆದರೆ ನಂತರ ಅವರ ಸಹಕಾರ ನಮಗೆ ಸಿಗಲಿಲ್ಲ ಎಂದು ಹೇಳಿದ್ದಾರೆ.

https://www.youtube.com/watch?v=T0tPWRVilg4

ಅಲ್ಲದೇ ಈ ಬಗ್ಗೆ ಮಾಧ್ಯಮದಲ್ಲೂ ಪ್ರಸಾರವಾಗಿದ್ದು, ನಂತರ ಉಗ್ರಪ್ಪ ಕೇಸ್ ವಾಪಸ್ ಪಡೆಯುವಂತೆ ಒತ್ತಡ ಹೇರಿದರು. ಈ ವಿಷಯದಲ್ಲಿ ಸಪೋರ್ಟ್ ಮಾಡಲು ಸಾಧ್ಯವಿಲ್ಲವೆಂದು ಹೇಳಿದರು. ಅಲ್ಲದೇ ನಮ್ಮ ವ್ಯವಸ್ಥೆಯೇ ಭ್ರಷ್ಟಾಚಾರದಿಂದ ಬೆತ್ತಲೆಯಾಗಿದೆ. ನಾನೊಬ್ಬ ಏನು ಮಾಡಲು ಸಾಧ್ಯ ಅಂತಾ ಕೈ ಚೆಲ್ಲಿದ್ದರು ಎಂದು ಮಾಯಾಸಿಂಗ್ ತಮ್ಮ ನೋವು ತೋಡಿಕೊಂಡರು.

ನಾನೊಬ್ಬಳು ಕ್ಯಾನ್ಸರ್ ಪೇಶೆಂಟ್. ನನಗೆ ಸಾಕಷ್ಟು ಒತ್ತಡ ಉಂಟಾಗಿದೆ. ಉಗ್ರಪ್ಪ ಪ್ರಭಾವಿ ರಾಜಕಾರಣಿಯಾಗಿದ್ದರೂ, ನನ್ನ ಪ್ರಕರಣದಲ್ಲಿ ಸಹಾಯ ಮಾಡುತ್ತೇನೆಂದು ಅರ್ಧಕ್ಕೆ ಕೈ ಕೊಟ್ಟಿದ್ದಾರೆ. ಇದೀಗ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದಾರೆ. ಅವರನ್ನ ಗೆಲ್ಲಿಸಬೇಕಾ ಬೇಡವಾ ಅನ್ನೋದನ್ನ ಬಳ್ಳಾರಿ ಜನ ಡಿಸೈಡ್ ಮಾಡಬೇಕು ಎಂದು ಮಮತಾ ಸಿಂಗ್ ಹೇಳಿದ್ದಾರೆ.

ಇನ್ನು ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ, ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಹೈಜಾಕ್ ಆಗಿದ್ದಕ್ಕೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೇಡಿಗೆ ಮುಂದಾಗಿದೆಯಾ ಎಂಬ ಅನುಮಾನ ಮೂಡಿದೆ.

Next Story

RELATED STORIES