1 ರನ್ ಬಾರಿಸಿದರೂ ಧೋನಿ ಬರೆಯಲಿದ್ದಾರೆ ದಾಖಲೆ!

ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ರನ್ ಬರ ಎದುರಿಸುತ್ತಿರಬಹುದು. ಆದರೆ ಶೂನ್ಯಕ್ಕಂತೂ ಔಟಾಗಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಕನಿಷ್ಠ 1 ರನ್ ಬಾರಿಸಿದರೂ ಧೋನಿ ಅಪರೂಪದ ದಾಖಲೆ ಬರೆಯಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಗುರುವಾರ ನಡೆಯಲಿರುವ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಧೋನಿ 1 ರನ್ ಬಾರಿಸಿದರೆ ಏಕದಿನ ಕ್ರಿಕೆಟ್ನಲ್ಲಿ 10,000 ರನ್ ಪೂರೈಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 5ನೇ ಹಾಗೂ ಹಾಗೂ ವಿಶ್ವದ 13ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ಇದೇ ಸರಣಿಯಲ್ಲಿ ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಹ್ಯಾಟ್ರಿಕ್ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದರು. ಇದೀಗ 37 ವರ್ಷದ ಧೋನಿ ಸರದಿ.
ಧೋನಿ ಈಗಾಗಲೇ ಏಕದಿನ ಕ್ರಿಕೆಟ್ನಲ್ಲಿ 10,173 ರನ್ ಪೂರೈಸಿದ್ದಾರೆ. ಆದರೆ 2007ರಲ್ಲಿ ಆಫ್ರಿಕಾ ಇಲೆವೆನ್ ವಿರುದ್ಧ ಮುರು ದಿನಗಳ ಪಂದ್ಯದಲ್ಲಿ 173 ರನ್ ಸಿಡಿಸಿದ್ದರು. ಆದರೆ ಆ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದರಿಂದ ಧೋನಿ ಆ ಶತಕ ಅಧಿಕೃತ ಮಾನ್ಯತೆ ಪಡೆದಿಲ್ಲ. ಇದೀಗ ಧೋನಿ ಖಾತೆಯಲ್ಲಿ 9999 ರನ್ ಇದೆ.
ಧೋನಿ ಈ ಶತಕ ಬಾರಿಸಿದರೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಒಬ್ಬರ ಅಪರೂಪದ ದಾಖಲೆ ಇದಾಗಲಿದೆ. ಏಕೆಂದರೆ ಭರ್ಜರಿ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಪ್ರದರ್ಶನದ ನಂತರ ಕೊನೆಯ ಕೆಲವೇ ಓವರ್ ಇರುವಾಗ ಕ್ರೀಸ್ಗೆ ಬರುವ ಧೋನಿ ಈ ಸಾಧನೆ ಮಾಡಿದ್ದಾರೆ ಅಂದರೆ ಇದು ಅಪರೂಪವೇ ಹೌದು.