Top

ನಾಡದ್ರೋಹಿಗಳಿಗೆ ಸೆಡ್ಡು ಹೊಡೆದ ಬೆಳಗಾವಿ ಕನ್ನಡಿಗರು

ನಾಡದ್ರೋಹಿಗಳಿಗೆ ಸೆಡ್ಡು ಹೊಡೆದ ಬೆಳಗಾವಿ ಕನ್ನಡಿಗರು
X

ಬೆಳಗಾವಿ: ಬೆಳಗಾವಿಯಲ್ಲಿ ನಾವು ನವೆಂಬರ್ ಒಂದರಂದು ಕರಾಳ ದಿನಾಚರಣೆ ಆಚರಿಸುತ್ತೇವೆಂದು ಹಠಮಾರಿತನ ಮೆರೆದಿರುವ ಎಂಇಎಸ್ ಪುಂಡರಿಗೆ ಸೆಡ್ಡು ಹೊಡೆದ ಕನ್ನಡಿಗರು ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು.

ಏಕೀಕರಣದ ಬಳಿಕ ಇದೇ ಮೊದಲ ಬಾರಿಗೆ ಮಧ್ಯರಾತ್ರಿ ರಾಜ್ಯೋತ್ಸವ ಆಚರಿಸಲಾಗಿದ್ದು, ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಲಾಗಿದ್ದು, ನಗರದ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಲಾಯಿತು.

ಇನ್ನು ಸಂಭ್ರಮಾಚರಣೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, 58 ವರ್ಷದ ಬಳಿಕ ಅತ್ಯಂತ ಅದ್ಧೂರಿಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಿಸಿದ ಬೆಳಗಾವಿ ಕನ್ನಡಿಗರು, ನಡುರಾತ್ರಿಯೇ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಈ ಮೂಲಕ ಬೆಳಗಾವಿ ಕನ್ನಡಿಗರು, ನಾಡದ್ರೋಹಿಗಳಿಗೆ ಬೆಳಗಾವಿ ನಮ್ಮದು ಎಂಬ ಖಡಕ್ ಸೂಚನೆಯನ್ನ ನೀಡಿದ್ದಾರೆ.

ಬೆಳಗ್ಗೆ 9 ಗಂಟೆಗೆ ಕನ್ನಡ ರಾಜ್ಯೋತ್ಸವ ಮೆರವಣಿಗೆ ಆರಂಭವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಮೇಯರ್ ಸಿದ್ದಪ್ಪ ಚಿಕ್ಕಲ್ಲದ್ದಿನಿ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಚೆನ್ನಮ್ಮನ ಮೂರ್ತಿಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ನಡೆಯಲಿದ್ದು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀಗಳು ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಅಲ್ಲದೇ ಕರಾಳ ದಿನಾಚರಣೆಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಕನ್ನಡ ರಾಜ್ಯೋತ್ಸವ ಮತ್ತು ಕರಾಳ ದಿನ ನಿಮಿತ್ತ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗೆ 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Next Story

RELATED STORIES