Top

ಸಣ್ಣಪುಟ್ಟ ಕಹಿ ಘಟನೆಗಳ ನಡುವೆ ಸಂಭ್ರಮ-ಸಡಗರ ನಡುವೆ ರಾಜ್ಯೋತ್ಸವ!

ಸಣ್ಣಪುಟ್ಟ ಕಹಿ ಘಟನೆಗಳ ನಡುವೆ ಸಂಭ್ರಮ-ಸಡಗರ ನಡುವೆ ರಾಜ್ಯೋತ್ಸವ!
X

ಕೆಲವು ಕಡೆ ಅಹಿತಕರ ಘಟನೆಗಳು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ನಾಡಿನೆಲ್ಲೇಡೆ 63ನೇ ಕನ್ನಡ ರಾಜ್ಯೋತ್ಸವ ದಿನಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಕರಾಳ ದಿನಾಚರಣೆ ಕರೆ ನೀಡಿತ್ತು. ಆದರೆ ಮಹಾರಾಷ್ಟ್ರ ಸೇರಿದಂತೆ ಮಠಾರಿ ನಾಯಕರೇ ಈ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು. ಆದರೆ ಕನ್ನಡತಿ ಮಧುಶ್ರೀ ಪೂಜರಿ ಉಪಮೇಯರ್ ಭಾಗಿಯಾಗಿದ್ದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಯಿತು. ಮೆರವಣಿಗೆಯಲ್ಲಿ ಚಿಕ್ಕಮಕ್ಕಳನ್ನು ಬಳಸಿದ್ದು ಕೂಡ ಆಕ್ರೋಶಕ್ಕೆ ಕಾರಣವಾಯಿತು.

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹೊರರಾಜ್ಯಗಳಿಂದ ಕಲಾತಂಡಗಳನ್ನು ಕರೆಯಿಸಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಕಲೆಗಳನ್ನು ಮೂಲೆಗುಂಪು ಮಾಡಿ ಕನ್ನಡಕ್ಕೆ ಅವಮಾನ ವೆಸಾಗಿದ್ದಾರೆಂದು ಕನ್ನಡಿಗರು ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಹೆಸರಿಗೆ ಮಾತ್ರ ಹೇಳಿದೆ. ಕನ್ನಡ ಕಲೆ ಭಾಷೆ ಬಗ್ಗೆ ಗೌರವ ಇರಬೇಕು, ಹೆಸರಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಆದರೆ ಜನಪದ ಕಲಾ ತಂಡಗಳನ್ನು ಹೊರರಾಜ್ಯದಿಂದ ಕರೆಯಿಸುವ ಅವಶ್ಯಕತೆ ಎನ್ನಿತು. ಕರ್ನಾಟಕದಲ್ಲಿ ಜನಪದ ಕಲಾತಂಡಗಳು ಇಲ್ವಾ ಎಂದು ಕನ್ನಡ ಕಟ್ಟಾಭಿಮಾನಿಗಳು ಆಯೋಜಕರನ್ನು ಪ್ರಶ್ನಿಸಿದ್ದಾರೆ.

ಶಿರಸಿಯಲ್ಲಿ ರೆಡ್ ತಂಡವು 400 ಮೀಟರ್ ಉದ್ದದ ಕನ್ನಡ ಧ್ವಜವನ್ನು ಹಿಡಿದು ಮೆರವಣಿಗೆ ನಡೆಸಿದರು. ಸುಮಾರು 3000 ವಿದ್ಯಾರ್ಥಿಗಳು ಧ್ವಜವನ್ನು ಹೊತ್ತು ಪಟ್ಟಣದಾದ್ಯಂತ ಸಂಚರಿಸಿ ಗಮನ ಸೆಳೆದಿದ್ದು ಕಣ್ಮನ ಸೆಳೆಯುವಂತಿತ್ತು.

ರಾಜಧಾನಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಗಲ್ಲಿ ಗಲ್ಲಿಗಳಲ್ಲಿ ರಾಜ್ಯೋತ್ಸವವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.

ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಕಲರವ. ಡೊಳ್ಳು ಕುಣಿತ, ಜಗ್ಗಲಗಿ ಮೇಳ ಹಾಗೂ ಮಕ್ಕಳ ಹೆಜ್ಜೆಗಳ ಸಮ್ಮಿಲನ. ರಾಜ್ಯದ ವಿವಿಧ ಪ್ರವಾಸಿ ತಾಣಗಳ ಸ್ತಬ್ಧ ಚಿತ್ರಗಳ ಆಕರ್ಷಣೆ. ಮೈಮನ ಸೆಳೆದ ಒನಕೆ ಒಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಮಹಾವೀರ ಸಂಗೊಳ್ಳಿ ರಾಯಣ್ಣನ ಪ್ರತಿರೂಪ. ಶಾಲಾ ಮಕ್ಕಳಿಂದ ನೃತ್ಯ ವಿವಿಧ ಕಲೆಗಳ ಅನಾವರಣ ಮಾಡಲಾಯಿತು.

Next Story

RELATED STORIES