Top

ಭಾರತ ಅತೀ ವೇಗದ ಜಯ: ತವರಿನಲ್ಲಿ ಸತತ 6ನೇ ಸರಣಿ ಗೆಲುವು

ಭಾರತ ಅತೀ ವೇಗದ ಜಯ: ತವರಿನಲ್ಲಿ ಸತತ 6ನೇ ಸರಣಿ ಗೆಲುವು
X

ಆಲ್​ರೌಂಡರ್ ರವೀಂದ್ರ ಜಡೇಜಾ ಮಾರಕ ದಾಳಿ ಹಾಗೂ ಬ್ಯಾಟ್ಸ್​ಮನ್​ಗಳ ಮಿಂಚಿನ ಆಟದಿಂದ ಭಾರತ ತಂಡ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 9ನೇ ವಿಕೆಟ್​ಗಳಿಂದ ಅತೀ ವೇಗದ ಜಯ ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-1ರಿಂದ ಬಗಲಿಗೆ ಹಾಕಿಕೊಂಡಿತು.

ತಿರುವನಂತಪುರಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 31.5 ಓವರ್ ಗಳಲ್ಲಿ 104 ರನ್​ಗಳಿಗೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಭಾರತ 14.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಇದು ಭಾರತ ತವರಿನಲ್ಲಿ ದಾಖಲಿಸಿದ ಸತತ 6ನೇ ಸರಣಿ ಗೆಲುವು ಇದಾಗಿದೆ. ಅಲ್ಲದೇ ವೆಸ್ಟ್ ಇಂಡೀಸ್ ವಿರುದ್ಧ ಸತತ 8ನೇ ಸರಣಿ ಜಯದ ದಾಖಲೆಯನ್ನು ವಿರಾಟ್ ಕೊಹ್ಲಿ ಪಡೆಯಿತು.

ಭಾರತದ ಪರ ಆರಂಭಿಕ ಶಿಖರ್ ಧವನ್ (6) ಮಾತ್ರ ವಿಫಲರಾದರು. ಆದರೆ ಭರ್ಜರಿ ಫಾರ್ಮ್​ನಲ್ಲಿರುವ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಮುರಿಯದ ಎರಡನೇ ವಿಕೆಟ್​ಗೆ 99 ರನ್ ಜೊತೆಯಾಟ ನಿಭಾಯಿಸಿದರು.

ರೋಹಿತ್​ ಶರ್ಮ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ ಅಜೇಯ 63 ರನ್ ಸಿಡಿಸಿದರೆ, ಕೊಹ್ಲಿ29 ಎಸೆತಗಳಲ್ಲಿ6 ಬೌಂಡರಿ ಸೇರಿದ 33 ರನ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಪರ ಸ್ಯಾಮ್ಯುಯೆಲ್ಸ್ (24) ಮತ್ತು ನಾಯಕ ಜೇಸನ್ ಹೋಲ್ಡರ್ (25) ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್ ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ.

ಜಡೇಜಾ 4 ವಿಕೆಟ್ ಪಡೆದು ಕೆರಿಬಿಯನ್ನರಿಗೆ ಲಗಾಮು ಹಾಕಿದರೆ, ಜಸ್​ಪ್ರೀತ್ ಬುಮ್ರಾ ಮತ್ತು ಖಲೀಲ್ ಅಹ್ಮದ್ ತಲಾ 2 ವಿಕೆಟ್ ಪಡೆದರು.

  • ಸಂಕ್ಷಿಪ್ತ ಸ್ಕೋರ್
  • ವೆಸ್ಟ್ ಇಂಡೀಸ್ 35.5 ಓವರ್ 104 (ಸ್ಯಾಮ್ಯುಯೆಲ್ಸ್ 24, ಹೋಲ್ಡರ್ 25, ಜಡೇಜಾ 34/4, ಬುಮ್ರಾ 11/2, ಖಲೀಲ್ 29/2).
  • ಭಾರತ 14.5 ಓವರ್ 1 ವಿಕೆಟ್​ಗೆ 105 (ರೋಹಿತ್ ಅಜೇಯ 63, ಕೊಹ್ಲಿ ಅಜೇಯ 33).

Next Story

RELATED STORIES