ಚಾಮುಂಡಿ ಬೆಟ್ಟದ ಹುಂಡಿ ಹಣ ಎಣಿಕೆ: ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹ

ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಕಳೆದ ಬಾರಿಯಂತೆ ಈ ಬಾರಿಯು ಹುಂಡಿಯೊಂದರಲ್ಲೇ ಕೋಟಿ ಹಣ ಸಂಗ್ರಹವಾಗಿದೆ. ಕಳೆದ ಬಾರಿಗಿಂತ 7ಲಕ್ಷ ಹೆಚ್ಚಿನ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕಾವೇರಿ ಗ್ರಾಮೀಣ ಬ್ಯಾಂಕ್ನ ಸಿಬ್ಬಂದಿಗಳಿಂದ ಹುಂಡಿ ಏಣಿಕೆಯಾಗಿದೆ.
ಐಗಿರಿ ನಂದಿನಿ, ನಂದಿತ ವೇದಿನಿ ಈ ಸಾಲುಗಳು ಕೇಳಿದ್ರೆ ಸಾಕು, ಪಟ್ಟನೇ ನೆನಪಾಗೋದು ನಾಡ ಅಧಿದೇವತೆ ಚಾಮುಂಡೇಶ್ವರಿ. ಯಾಕಂದ್ರೆ, ಚಾಮುಂಡೇಶ್ವರಿಯನ್ನ ನೆನೆದು ದೇವಿಯ ದರುಶನ ಪಡೆದರೆ ಸಾಕು ನಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತೆ ಅನ್ನುವುದು. ನಂಬಿಕೆ. ಈ ನಂಬಿಕೆಯಿಂದಲೇ ದೇವಿಯ ಸನ್ನಿಧಾನಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ. ಹೀಗೆ ಆಗಮಿಸುವ ಭಕ್ತರಿಂದ ಕಾಣಿಕೆ ರೂಪದಲ್ಲಿ ಹರಿದು ಬಂದಿದ್ದು ಬರೋಬ್ಬರಿ 1 ಕೋಟಿ 27ಲಕ್ಷ ಹಣ.
ಒಂದೂವರೆ ತಿಂಗಳ ಬಳಿಕ ಎಣಿಕೆಯಾದ ದೇವಾಲಯದ 7 ಹುಂಡಿಯಲ್ಲಿ ಬರೋಬ್ಬರಿ 1 ಕೋಟಿ, 27ಲಕ್ಷದ 67 ಸಾವಿರದ 605ರೂ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 34 ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಚಿನ್ನ ಬೆಳ್ಳಿ ಮುಂದಿನ ದಿನಗಳಲ್ಲಿ ಏಣಿಕೆಯಾಗುವ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಪ್ರಸಾದ್ ಮಾಹಿತಿ ನೀಡಿದ್ದಾರೆ. ಕಾವೇರಿ ಗ್ರಾಮೀಣ ಬ್ಯಾಂಕ್ನ 35 ಮಂದಿ ಸಿಬ್ಬಂದಿಗಳು ಹುಂಡಿ ಹಣ ಎಣಿಕೆ ಕಾರ್ಯ ನಡೆಸಿದ್ದು, ಕಳೆದ ಬಾರಿ 1ಕೋಟಿ 20ಲಕ್ಷ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು.
ಒಟ್ಟಾರೆ, ನಾಡ ದೇವಿಯನ್ನ ಕಾಣಲೆಂದು ಲಕ್ಷಾಂತರ ಮಂದಿ ಭಕ್ತರು ಆಗಮಿಸಿ, ಕಾಣಿಕೆ ರೂಪದಲ್ಲಿ ನೀಡುವ ಹಣದಿಂದ ಇವತ್ತು ಕೋಟಿ ಸಾಲಿನಲ್ಲಿ ಬೆಟ್ಟದ ಚಾಮುಂಡಿ ದೇವಿಯು ಸೇರ್ಪಡೆಯಾಗಿದೆ. ಇದರಿಂದ ಸರ್ಕಾರದ ಬೊಕ್ಕಸವೂ ತುಂಬಿದೆ.