ಎಂಇಎಸ್ ಪುಂಡರಿಗಾಗಿ ಜವಾರಿ ರ್ಯಾಪ್ ಸಾಂಗ್ ರೆಡಿ

X
TV5 Kannada31 Oct 2018 9:15 AM GMT
ಬೆಳಗಾವಿ: ಕನ್ನಡ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಆಚರಿಸುತ್ತೇವೆ ಎಂದು ಹೇಳುತ್ತಿರುವ ಎಂಇಎಸ್ ಪುಂಡರಿಗೆ ಈಗಾಗಲೇ ಬೆಳಗಾವಿ ಕನ್ನಡಿಗ ವಿದ್ಯಾರ್ಥಿಗಳು ಹಾಡಿನ ಮೂಲಕ ಚುರುಕು ಮುಟ್ಟಿಸಿದ್ದಾರೆ.
ಇದೀಗ ವಿದ್ಯಾರ್ಥಿನಿಯೊಬ್ಬಳು ರ್ಯಾಪ್ ಸಾಂಗ್ ಹಾಡುವ ಮೂಲಕ ಎಂಇಎಸ್ ಹಠಮಾರಿಗಳಿಗೆ ಬೆಳಗಾವಿ ನಮ್ಮದು ಎಂದು ಕನ್ನಡ ಪಾಠ ಹೇಳಿದ್ದಾಳೆ.
ಬೆಳಗಾವಿಯ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮೇಘನಾ, ಭಾಷೆ, ಗಡಿ ತಂಟೆ ತೆಗೆಯುವ ನಾಡದ್ರೋಹಿಗಳಿಗೆ ಜವಾರಿ ಭಾಷೆಯಲ್ಲಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ.
ಶಿವಮೊಗ್ಗ ಮೂಲದ ಮೇಘನಾ, ಕಾಲೇಜಿನ ನಾಡಹಬ್ಬ ಕಾರ್ಯಕ್ರಮದಲ್ಲಿ, ಕರ್ನಾಟಕದಲ್ಲಿದ್ದರೂ ಕೂಡ ಕನ್ನಡ ಬರೋದಿಲ್ಲ ಅಂತಾ ಸೊಕ್ಕು ತೋರಿಸುವವರಿಗೆ, ಬೆಳಗಾವಿ ಕನ್ನಡಿಗರದ್ದು, ನಿಮಗೆ ಇಷ್ಟಾ ಇಲ್ಲಾ ಅಂದ್ರೆ ಹೋಗ್ತಾ ಇರಿ ಎಂದು ಹೇಳಿದ್ದಾಳೆ.
ಎಂಇಎಸ್ ಪುಂಡರಿಗೆ ಚುರುಕು ಮುಟ್ಟಿಸಿರುವ ಈ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Next Story