Top

ಬಾಕ್ಸಾಫೀಸ್​​​ನಲ್ಲಿ ಕುರುಕ್ಷೇತ್ರ-KGF ಜಟಾಪಟಿ..!?

ಬಾಕ್ಸಾಫೀಸ್​​​ನಲ್ಲಿ ಕುರುಕ್ಷೇತ್ರ-KGF ಜಟಾಪಟಿ..!?
X

ಅಭಿಮಾನಿಗಳ ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕುರುಕ್ಷೇತ್ರ ಹಾಗೂ ಇಂದಿನ ಎಂಗ್ ಜನರೇಷನಾ ಫೇವರೆಟ್ ತಾರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಒಟ್ಟಿಗೆ ಥಿಯೇಟರ್​​ ಅಂಗಳಕ್ಕೆ ಜಿಗಿಯಲಿವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಬಿಗ್ ಮೂವಿ ಮುನಿರತ್ನ ಕುರುಕ್ಷೇತ್ರ. ಧುರ್ಯೋಧನ ಧಿರಿಸಿನಲ್ಲಿ ದಚ್ಚು ಧಗಧಗ ಧಗಿಸಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಪಕ ಮುನಿರತ್ನ 2D ಮತ್ತು 3D ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಿದ್ದಾರೆ. ಅಂದುಕೊಂಡತೆ ಎಲ್ಲವೂ ಆಗಿದ್ದಾರೆ ಇಷ್ಟೊತ್ತಿಗಾಗಲೇ ಕುರುಕ್ಷೇತ್ರ ಕಿರುತೆರೆಯಲ್ಲೆ ಕುಣಿಯ ಬೇಕಿತ್ತು.ಆದರೆ ನಿಜವಾದ ಸಿನಿಮಾ ನಾವು ಅಂದು ಕೊಂಡತೆ ಅಲ್ಲ.ಅದಕ್ಕೆ ಯಾವಾಗ ಏನು ಬೇಕೋ , ಯಾವ್ದು ಬೇಕೋ ಅದನ್ನೇ ಆರಿಸಿಕೊಳುತ್ತದೆ.

ಕುರುಕ್ಷೇತ್ರದ ಫಸ್ಟ್ ಆಫ್ ಒಕೆ ಆಗಿದೆ. 2D ಮತ್ತು 3D ಟೆಕ್ನಾಲಜಿಯಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರ ಕಡೆಯ ಹಂತ ಕೆಲಸಗಳು ಪ್ರಗತಿಯಲ್ಲಿವೆ. ಈಗಾಗಲೇ 2D ವರ್ಷನ್ ಕಾಪಿ ಕಂಪ್ಲಿಟ್ ಆಗಿದ್ದು 10ನೇ ತಾರಿಖ್ ಫೈನಲ್ ಆಗಿ 2D ವರ್ಷನ್ ಕಾಪಿಯನ್ನು ಚಿತ್ರತಂಡ ನೋಡಲಿದೆ. ನಿರ್ಮಾಪಕ ಮುನಿರತ್ನ ಮನ ತೃಪ್ತಿಯಾದ ಕೂಡಲೇ ಕುರುಕ್ಷೇತ್ರ ಚಿತ್ರತಂಡದ ಕಡೆಯಿಂದ ಶುಭಸುದ್ಧಿಗಳು ಒಂದೊಂದಾಗಿಯೇ ಹೊರ ಬರಲಿವೆ..

ಈಗಾಗಲೇ ಸೆನ್ಸಾರ್​​ಗೆ ಸಿನಿಮಾವನ್ನು ಕಳಿಸಿದ್ದು ನವೆಂಬರ್ 10ನೇ ತಾರಿಖ್ ಸೆನ್ಸಾರ್ ಮಾನ್ಯತ ಪತ್ರ ಚಿತ್ರತಂಡಕ್ಕೆ ಧಕ್ಕಲಿದೆ. ಇನ್ನು 3D ವರ್ಷನ್ ಕೆಲಸ ಶೇಖಡ 25% ಬಾಕಿ ಇದ್ದು ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್ ಆಗಲಿದೆ. ಅಲ್ಲಿಗೆ ಈ ನವೆಂಬರ್ ತಿಂಗಳ ಕೊನೆ ಅಥವಾ ಡಿಸೆಂಬರ್ ಮೊದಲ ವಾರ ಆಡಿಯೋ , ಕ್ರಿಸ್​​ಮಸ್​​ಗೆ ಫುಲ್ ವಿಡಿಯೋ. ಎಲ್ಲಾ ವಿಚಾರಗಳನ್ನು ನೋಡ್ತಿದ್ರೆ ಕೆಜಿಎಫ್​​ಗೂ ಕುರುಕ್ಷೇತ್ರಕ್ಕೂ ಕ್ಲ್ಯಾಶ್ ಆಗೋದು ಗೋಚರವಾಗುತ್ತಿದೆ.

ಕೆಜಿಎಫ್ ಚಿತ್ರ ಡಿಸೆಂಬರ್ ಕೊನೆಯವಾರಕ್ಕೆ ಬರುತ್ತೆ ಎಂದು ಹೇಳಲಾಗಿದೆ.. ಇನ್ನು ಕುರುಕ್ಷೇತ್ರ ಚಿತ್ರದ ಕೆಲಸ ಕಾರ್ಯಗಳ ವೇಗ ನೋಡ್ತಿದರೆ, ಡಿಸೆಂಬರ್​ನಲ್ಲೇ ಥಿಯೇಟರ್​ ಮುಂದೆ ಕಟೌಟ್ ನಿಲ್ಲೋ ಸೂಚನೆ ಸಿಕ್ತಿದೆ.

ಯಶ್​ ನಟನೆಯ ಕೆಜಿಎಫ್ ಸಿನಿಮಾ ಕನ್ನಡದ ಜೊತೆಗೆ ತಮಿಳು , ತೆಲುಗು ಹಾಗೂ ಹಿಂದಿಯಲ್ಲಿ ಬರುತ್ತಿರುವ ಕಾರಣ ಕೊಂಚ ಬದಲಾವಣೆ ಮಾಡಲು ಹೊರಟಿದೆ ಪ್ರಶಾಂತ್ ನೀಲ್ ಸಾರಥ್ಯದ ತಂಡ. ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ವಿತರಣೆ ಮಾಡಲು ಬಂದಿರುವ ಬಾಲಿವುಡ್​​ನ ಅನೀಲ್ ತಾಡಾನಿ ಕ್ಲೈಮ್ಯಾಕ್ಸ್ ಫೈಟ್ ಲೆಂತ್ ಹೆಚ್ಚು ಮಾಡಲು ಸೂಚಿಸಿದ್ದಾರೆ. ಈ ಕಾರಣಕ್ಕೆ ಮತ್ತೆ ಕೆಜಿಎಫ್ ಸೆಟ್​​ಗೆ ಚಿತ್ರತಂಡ ಹೋಗ ಬೇಕಿದೆ. ಈ ಕೆಲಸ ವಿಳಂಭವಾದ್ರೆ ಡಿಸೆಂಬರ್​​ಗೆ ಕೆಜಿಎಫ್ ಬರೋದು ಡೌಟ್​​.

ಒಟ್ಟಿನಲ್ಲಿ ಕೆಜಿಎಫ್ ಮತ್ತು ಕುರುಕ್ಷೇತ್ರ ರಿಲೀಸ್ ವಿಚಾರ ಸಕಷ್ಟು ಕುತೂಹಲ ಮೂಡಿಸಿದೆ. ಒಂದುವೇಳೆ ಒಟ್ಟಿಗೆ ಎರಡು ಸಿನಿಮಾಗಳು ಬಂದ್ರೆ ಬಾಕ್ಸಾಫೀಸ್ ವಾರ್ ಆಗೋದು 100% ಗ್ಯಾರಂಟಿ. ಜೊತೆಗೆ ಅಭಿಮಾನಿಗಳ ದೊಡ್ಡ ಜಾತ್ರೆಯೆ ನೆರೆಯೋದು 200% ಗ್ಯಾರಂಟಿಯಾಗಿದೆ.

Next Story

RELATED STORIES