Top

ನನಗೆ ಸೊಸೆಗಿಂತ ಪಕ್ಷ ಹಾಗೂ ದೇಶದ ಹಿತ ಮುಖ್ಯ: ಹೆಚ್.ಡಿ ದೇವೇಗೌಡ

ನನಗೆ ಸೊಸೆಗಿಂತ ಪಕ್ಷ ಹಾಗೂ ದೇಶದ ಹಿತ ಮುಖ್ಯ: ಹೆಚ್.ಡಿ ದೇವೇಗೌಡ
X

ನನಗೆ ಸೊಸೆಗಿಂತ ಪಕ್ಷ ಹಾಗೂ ದೇಶದ ಹಿತ ಮುಖ್ಯ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ರಾಮನಗರದಲ್ಲಿ ಹೇಳಿದರು.

ರಾಮನಗರ ಉಪಚುನಾವಣದಲ್ಲಿ ಝಣ ಝಣ ಕಾಂಚಾಣ. ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರವಾಗಿ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.ಮಾಜಿ ಪ್ರಧಾನಿ ದೇವೇಗೌಡರ ಪ್ರಚಾರಕ್ಕೆ ಜನರನ್ನು ಕರೆತರಲು ಜಕ್ಕಸಂದ್ರ ಗ್ರಾಮದಲ್ಲಿ ಹಣ ಹಂಚಿಕೆ ಮಾಡಲಾಯಿತು.

ಮಾಜಿ ಪ್ರಧಾನಿ ದೇವೇಗೌಡರು ಮತ್ತೆ ರಾಮನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಚಾರದ ಉದ್ದಕ್ಕೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಜೆಡಿಎಸ್ ವರಿಷ್ಠರು, ವ್ಯಕ್ತಿಗಿಂತ ನನಗೆ ಪಕ್ಷ ಹಾಗೂ ದೇಶ ಹಿತ ಮುಖ್ಯ ಅಂತ ಹೇಳಿದರು.

ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಮತ್ತೆ ರಾಮನಗರ ಉಪ ಕದನದ ಅಖಾಡಕ್ಕೆ ಧುಮುಕಿದ್ದಾರೆ.. ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ ದೋಸ್ತಿ ಅಭ್ಯರ್ಥಿ ಅನಿತ ಕುಮಾರಸ್ವಾಮಿ ಪರ ಮತಯಾಚಿಸಿದರು. ಹಿರಿಯ ಮುಖಂಡ ಪಿಜಿಆರ್ ಸಿಂಧ್ಯಾ ಹಾಗು ಸಾವಿರಾರು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಬಹಿರಂಗ ಪ್ರಚಾರದಲ್ಲಿ ಮಾತಾಡಿದ ದೇವೇಗೌಡರು, ಬಿಜೆಪಿಯನ್ನು ದೇಶದಿಂದ ಅಳಿಸೋ ಇಚ್ಛೆಯಿರೋ ಎಲ್ಲಾ ಶಕ್ತಿಗಳು ಒಂದಾಗ್ತಿದೆ ಅಂತ ಹೇಳಿದರು.

ಒಟ್ಟಿನಲ್ಲಿ ರಾಮನಗರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ದೇವೇಗೌಡರ ಎಂಟ್ರಿಯಿಂದ ಜೆಡಿಎಸ್ ಮತದಾರರಲ್ಲಿ ಇನ್ನಷ್ಟು ಹುಮ್ಮಸ್ಸು ಮೂಡಿದೆ.

Next Story

RELATED STORIES