Top

ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್ ..?

ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್ ..?
X

ಬಹುಭಾಷಾ ನಟಿ, ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್ ಆಯ್ತಾ..? ಇನ್ಸ್ಟ್ರಾಗ್ರಾಂನಲ್ಲಿ ಅನುಷ್ಕಾ ಪೋಸ್ಟ್ ಮಾಡಿರೋ ಫೋಟೋ ಒಂದು ಅನುಮಾನ ಮೂಡಿಸಿತ್ತು. ಇದೆಲ್ಲ ಸುಳ್ಳು ಸುದ್ದಿ ಮದುವೆ ಇಲ್ಲ. ಅಸಲಿ ಕಥೆನೇ ಬೇರೆ ಇದೆ ಅಂತಿದ್ದಾರೆ ಅನುಷ್ಕಾ ಶೆಟ್ಟಿ.

ಕಾಲುಂಗುರದ ರೀತಿ ಪುಟ್ಟ ಸಸಿಯನ್ನ ಕಾಲ್ಬೆರಳಿಗೆ ಸೇರಿಸಿ, ಫೋಟೋ ಕ್ಲಿಕ್ ಮಾಡಿರೋ ಅನುಷ್ಕಾ, ನೊ ರಿಕ್ವರ್ಡ್​ ಎಂದು ಇನ್ಸ್ಟ್ರಾಗ್ರಾಂನಲ್ಲಿ ಮಾಡಿದ ಪೋಸ್ಟ್ವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಪೋಸ್ಟ್ ನೋಡಿದವರು ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್ ಆಗಿದೆ. ಅದನ್ನ ಈ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಹೇಳ್ತಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡ್ತಿತ್ತು. ಕೆಲವರಂತೂ ಕಂಗ್ರಾಟ್ಸ್ ಅಂತ ವಿಶಸ್ ಕೂಡ ಹೇಳ್ತಿದ್ದಾರೆ.

ಇನ್ನೂ ಅನುಷ್ಕಾ ಶೇಟ್ಟಿ ಮಾಡಿರೋ ಈ ಪೋಸ್ಟ್ ಹಿಂದಿನ ಕಥೆ ಬೇರೆನೇ ಇದೆ. ಸೈಜ್ ಝೀರೋ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ಆ ತೂಕ ಇಳಿಸೋಕೆ ಮಾಡಿದ ಸರ್ಕಸ್ ಒಂದೆರಡಲ್ಲ. ಎಷ್ಟೇ ಕಸರತ್ತು ನಡೆಸಿದರು, ಪ್ರಯೋಜನವಾಗಿರಲಿಲ್ಲ. ಅದೇ ಕಾರಣಕ್ಕೆ ಸದ್ಯ ನಾರ್ವೆಯ ಪ್ರಕೃತಿ ವೈದ್ಯ ಶಾಲೆಯಲ್ಲಿ ತೂಕ ಇಳಿಸಿಕೊಳ್ಳೋ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲೇ ಬಿಡುವಿನ ಸಮಯದಲ್ಲಿ ಪ್ರಕೃತಿ ನಡುವೆ ಕ್ಲಿಕ್ಕಿಸಿಕೊಂಡ ಫೋಟೋ ಇದು.

ನನ್ನ ಮದುವೆಗೂ ಈ ಫೋಟೋಗೂ ಏನು ಸಂಬಂಧ ಇಲ್ಲ ಅಂತ ಅನುಷ್ಕಾ ಶೆಟ್ಟಿ ಹೇಳ್ತಿದ್ದಾರೆ. ಶೀಘ್ರದಲ್ಲೇ ತೂಕ ಇಳಿಸಿಕೊಂಡು ಬಳಕುವ ಬಳ್ಳಿಯಾಗಿ ಅಭಿಮಾನಿಗಳನ್ನ ರಂಜಿಸೋ ಲೆಕ್ಕಾಚಾರದಲ್ಲಿದ್ದಾರೆ. ಇನ್ನೂ ಭಾಗಮತಿ ನಂತರ ಅನುಷ್ಕಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ತೂಕ ಇಳಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ಮಿಂಚೋ ಉತ್ಸಾಹದಲ್ಲಿದ್ದಾರೆ. ನವೆಂಬರ್ 7ಕ್ಕೆ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ.ಅಂದು ಸಿಹಿಸುದ್ದಿ ಸಿಕ್ಕರೂ ಸಿಗಬಹುದು..

ಅನುಷ್ಕಾ ಶೆಟ್ಟಿ, ಬಾಹುಬಲಿ ಪ್ರಭಾಸ್ನ ಮದ್ವೆ ಆಗ್ತಾರೆ ಎಂದು ಸಾಕಷ್ಟು ಸುದ್ದಿ ಹರಿದಾಡ್ತಿದೆ.ಪುತ್ತೂರಿನಲ್ಲಿ ಹುಟ್ಟಿ ಬೆಳೆದ ಅನುಷ್ಕಾ ಶೆಟ್ಟಿ, ದಶಕದ ಹಿಂದೆ ಟಾಲಿವುಡ್ ಪ್ರವೇಶಿಸಿದರು.ತೆಲುಗು, ತಮಿಳಿನ ಸೂಪರ್ ಸ್ಟಾರ್​ಗಳ ಜೊತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಟಾಪ್ ಸೌತ್ ಹೀರೋಯಿನ್ ಪಟ್ಟಕ್ಕೇರಿದ್ದಾರೆ. ಅರುಂಧತಿ, ಬಾಹುಬಲಿ, ರುದ್ರಮ ದೇವಿ, ಭಾಗಮತಿ ಅನುಷ್ಕಾಗೆ ಅಪಾರ ಹೆಸರು ತಂದು ಕೊಟ್ಟ ಸಿನಿಮಾಗಳು.

ಒಟ್ಟಾರೆ ಅನುಷ್ಕಾ ಶೆಟ್ಟಿ ತೂಕ ಇಳಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ನಟಿಸಿ, ಪ್ರೇಕ್ಷಕರನ್ನ ರಂಜಿಸ್ತಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ನವೆಂಬರ್ 7ಕ್ಕೆ ಅನುಷ್ಕಾ ಏನ್ ಸ್ವೀಟ್ ನ್ಯೂಸ್ ಕೊಡ್ಬೋದು ಅಂತ ಅಭಿಮಾನಿಗಳು ಕಾಯ್ತಿದ್ದಾರೆ.

Next Story

RELATED STORIES