Top

2 ದಿನದಲ್ಲಿ 1500 ಶತಕೋಟಿ ಕಳೆದುಕೊಂಡ ಜಗತ್ತಿನ ಅತ್ಯಂತ ಶ್ರೀಮಂತ!

2 ದಿನದಲ್ಲಿ 1500 ಶತಕೋಟಿ ಕಳೆದುಕೊಂಡ ಜಗತ್ತಿನ ಅತ್ಯಂತ ಶ್ರೀಮಂತ!
X

ಜಗತ್ತಿನ ಅತ್ಯಂತ ಶ್ರೀಮಂತ ಎಂಬ ಗೌರವಕ್ಕೆ ಪಾತ್ರರಾಗಿರುವ ಅಮೆಜಾನ್ ಕಂಪನಿ ಮುಖ್ಯಸ್ಥ ಜೆಫ್ ಬೆಸೋಸ್ ಎರಡು ದಿನದಲ್ಲಿ 19.2 ಶತಕೋಟಿ ಡಾಲರ್ ಅಂದರೆ ಸುಮಾರು 1500 ಶತಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದಿಢೀರ್ ಕುಸಿತ ಉಂಟಾಗಿದ್ದರಿಂದ ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಂಡಿದ್ದು, ಇದರಿಂದ ಏಕಾಏಕಿ ಅಮೆಜಾನ್ ಕಂಪನಿ ಮುಖ್ಯಸ್ಥರು ಸಾವಿರಾರು ಕೋಟಿ ರೂ. ಕಳೆದುಕೊಂಡಿದ್ದಾರೆ.

ಕಳೆದ ಜುಲೈ ತಿಂಗಳಲ್ಲಿ ಫೇಸ್​ಬುಕ್ ಮುಖ್ಯಸ್ಥ ಮಾರ್ಕ್​ ಜುಗರ್​ಬರ್ಗ್​ ಒಂದೇ ದಿನದಲ್ಲಿ 16.5 ಶತಕೋಟಿ ಕಳೆದುಕೊಂಡಿದ್ದರು. ಇದರ ಬೆನ್ನಲ್ಲೇ ಜಗತ್ತಿನ ಅತೀ ಶ್ರೀಮಂತ ಜೆಫ್ ಬೆಸೋಸ್ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಎರಡು ದಿನದಲ್ಲಿ ಕಳೆದುಕೊಂಡಿದ್ದಾರೆ.

ನಸ್ದಾಕ್ ಕಂಪೊಸಿಟ್ ಇಂಡೆಕ್ಸ್ ಮಾರುಕಟ್ಟೆ ಇಷ್ಟು ಕೆಳ ಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು. ಕಳೆದ ವಾರಂತ್ಯವಾದ ಶುಕ್ರವಾರ 7.8ರಷ್ಟು ಕುಸಿತ ಕಂಡಿದ್ದ ಷೇರು ಸೋಮವಾರ ಮತ್ತೆ 6.8ರಷ್ಟು ಕುಸಿತ ಕಂಡಿತು. 167.7 ಶತಕೋಟಿ ಇದ್ದ ಮಾರುಕಟ್ಟೆ ಮೌಲ್ಯ ಎರಡು ದಿನದಲ್ಲಿ 128.1 ಶತಕೋಟಿಗೆ ಇಳಿಯಿತು.

Next Story

RELATED STORIES