ನಿಮ್ಮಿಂದ ಮಕ್ಕಳಿಗೆ ಶಿಕ್ಷೆಯಾಗದಿರಲಿ ರೆಡ್ಡಿಗೆ ಸಿದ್ದು ಟಾಂಗ್

ಮಾಜಿ ಶಾಸಕ ಜನಾರ್ದನ ರೆಡ್ಡಿ ಮಾಡಿರುವ ಪಾಪಗಳಿದ ಅವರ ಮಕ್ಕಳಿಗೆ ದೇವರು ಶಿಕ್ಷೆಯನ್ನು ನೀಡದಿರಲಿ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಜನಾರ್ದನ ರೆಡ್ಡಿ ನಡುವೆ ಟ್ವಿಟರ್ ವಾರ್ ಇಂದು ಕೂಡ ಮುಂದುವರೆದಿದೆ. ಬಳ್ಳಾರಿ ಚುನಾವಣಾ ಪ್ರಚಾರದ ಭರಾಟೆಯ ನಡುವೆ ಪರಸ್ಪರ ನಾಯಕರು ಆರೋಪ- ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದರೆ.
ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಪುತ್ರನ ಸಾವಿನ ವಿಚಾರವನ್ನು ಪ್ರಸ್ತಾಪಿಸಿದ್ದರು. ಪುತ್ರನ ಸಾವು, ಸಿದ್ದರಾಮಯ್ಯಗೆ ದೇವರು ಕೊಟ್ಟ ಶಿಕ್ಷೆ ಎಂದು ಹೇಳಿದ್ದರು. ಇಂದು ಇದಕ್ಕೆ ಪ್ರತಿಯಾಗಿ ಟ್ವಿಟರ್ ಮೂಲಕ ಸಿದ್ದರಾಮಯ್ಯ ಉತ್ತರಿಸಿದ್ದಾರೆ, ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಟ್ವಿಟರ್ ಮೂಲಕ ಟಾಂಗ್ ನೀಡಿದ್ದರೆ.
ತೀರಾ ಖಾಸಗಿ ವಿಚಾರಗಳು ಅದರಲ್ಲೂ ಮೂರು ತಿಂಗಳ ಅವಧಿಗೆ ಸಂಸದರ ಆಯ್ಕೆಗೆ ನಡೆಯುತ್ತಿರುವ ಲೋಕಸಭೆ ಉಪಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪವಾಗುತ್ತಿರುವುದು ನಿಜಕ್ಕೂ ಜನರಲ್ಲಿ ಅಚ್ಚರಿ ಮೂಡಿಸುತ್ತಿದೆ.