Top

00.08 ಸೆಕೆಂಡ್​ನಲ್ಲಿ ಸ್ಟಂಪ್​: ಧೋನಿ ವೇಗಕ್ಕೆ ದುನಿಯಾ ಸ್ಟನ್​!

00.08 ಸೆಕೆಂಡ್​ನಲ್ಲಿ ಸ್ಟಂಪ್​: ಧೋನಿ ವೇಗಕ್ಕೆ ದುನಿಯಾ ಸ್ಟನ್​!
X

ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ರನ್ ಬರ ಎದುರಿಸುತ್ತಿರಬಹುದು. ಆದರೆ ವಿಕೆಟ್ ಹಿಂದಿನ ಅವರ ಕೈಚಳಕವನ್ನು ಸರಿಗಟ್ಟುವುದು ಕಷ್ಟಸಾಧ್ಯ. ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಧೋನಿ ಅದನ್ನು ಮತ್ತೊಮ್ಮೆ ನಿರೂಪಿಸಿದರು.

ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರವಾಸಿ ವೆಸ್ಟ್​​ ಇಂಡೀಸ್​ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಕೀಮೋ ಪೌಲ್ ಅವರನ್ನು ಸ್ಟಂಪ್ ಮಾಡಿದ್ದು ಎಷ್ಟು ವೇಗವಾಗಿ ಇತ್ತು ಅಂದರೆ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ನಂಬದೇ ಪದೇಪದೆ ಕೇಳಿ ಖಚಿತಪಡಿಸಿಕೊಂಡರು.

ಕೀಮೋ ಪೌಲ್ ರನ್ನು ಧೋನಿ ಕೇವಲ 00.08 ಸೆಕೆಂಡ್ ನಲ್ಲಿ ಸ್ಟಂಪ್ ಮಾಡಿದರು. ಆ ಮೂಲಕ ಮತ್ತೆ ಧೋನಿ ಸ್ಟಂಪಿಂಗ್ ನಲ್ಲಿ ತನ್ನನ್ನು ಸರಿಗಟ್ಟುವವರಿಲ್ಲ ಎಂದು ಸಾಬೀತುಪಡಿಸಿದರು.

ರವೀಂದ್ರ ಜಡೇಜಾ ಅವರು ಎಸೆದ 28ನೇ ಓವರ್ ​ನಲ್ಲಿ ಕೆರೆಬಿಯನ್​ ಆಟಗಾರ ಕೀಮೋ ಪೌಲ್​​ ರಕ್ಷಣಾತ್ಮಕ ಆಟವಾಡಲು ಮುಂದಾದಾಗ ಬ್ಯಾಟ್​ ನಿಂದ ತಪ್ಪಿಸಿಕೊಂಡ ಬಾಲ್​ ಧೋನಿ ಕೈಗೆ ತಲುಪಿದೆ. ಪೌಲ್​ ಹಿಂದೆ ತಿರುಗುವಷ್ಟರಲ್ಲಿಯೇ ಧೋನಿ ಸ್ಟಂಪ್​ ಮಾಡಿದ್ದನ್ನು ಕಂಡು ಸ್ವತಃ ಪೌಲ್​ ಅಂಪೈರ್​ ತೀರ್ಮಾನಕ್ಕಾಗಿ ಕಾಯದೆ ಪೆವಿಲಿಯನ್​​ ಕಡೆ ಮುಖ ಮಾಡಿದರು.​ ಈ ಅದ್ಬುತ ಸ್ಟಂಪಿಂಗ್ ಗೆ ಧೋನಿ ತೆಗೆದುಕೊಂಡಿದ್ದು ಕೇವಲ 00.08 ಸೆಕೆಂಡ್ ಗಳು ಮಾತ್ರ. ಆ ಮೂಲಕ ಧೋನಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದ್ದಾರೆ.

ಏಕದಿನ ಇತಿಹಾಸದಲ್ಲಿ ಅತೀ ಹೆಚ್ಚು ಅಂದರೆ 115 ಸ್ಟಂಪ್​ ಮಾಡಿದ ಕೀರ್ತಿ ಮಿಸ್ಟರ್ ಕೂಲ್​ ಧೋನಿ ಅವರ ಪಾಲಾಗಿದ್ದು, ಬಳಿಕದ ಸ್ಥಾನದಲ್ಲಿ 99 ಸ್ಟಂಪಿಂಗ್ ನೊಂದಿಗೆ ಶ್ರೀಲಂಕಾದ ಕುಮಾರ ಸಂಗಕ್ಕಾರ ಇದ್ದಾರೆ.

Next Story

RELATED STORIES