Top

ಉಪ ಚುನಾವಣೆ ನಂತರ ಏನಾಗುತ್ತೆ ಗೊತ್ತಾ? ಶೆಟ್ಟರ್ ಭವಿಷ್ಯ

ಉಪ ಚುನಾವಣೆ ನಂತರ ಏನಾಗುತ್ತೆ ಗೊತ್ತಾ? ಶೆಟ್ಟರ್ ಭವಿಷ್ಯ
X

ಜಮಖಂಡಿ ವಿಧಾನಸಭೆ ಉಪ ಚುನಾವಣೆ ಗೆಲ್ಲುವ ಮೂಲಕ ಮ್ಯಾಜಿಕ್ ನಂಬರ್ ತಲುಪುತ್ತೇವೆ. ಬೇಕಾದರೆ ಇದನ್ನೇ ನಾನು ಹೇಳಿದ ಭವಿಷ್ಯ ಎಂದು ಬರೆದಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಜಮಖಂಡಿಯಲ್ಲಿ ಮಾತನಾಡಿದ ಅವರು, ನನ್ನ ಇಷ್ಟು ವರ್ಷಗಳ ರಾಜಕೀಯ ಅನುಭವದಲ್ಲಿ ಭವಿಷ್ಯ ಹೇಳುತ್ತಿದ್ದೇನೆ. ಕೇಳಿ. ಜಮಖಂಡಿಯಲ್ಲಿ ಗೆದ್ದು ಸರಕಾರ ರಚನೆಗೆ ಬೇಕಾದ ಸಂಖ್ಯೆಯನ್ನು ಬಿಜೆಪಿ ಪಡೆಯಲಿದೆ. ಈ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದರು.

ಈಗ ಕೂಡ ನಾನು ಹೇಳುವ ಭವಿಷ್ಯ ನಿಜವಾಗಲಿದೆ. ಜಮಖಂಡಿ ಎಲೆಕ್ಷನ್ ಗೆಲ್ಲುವ ಮೂಲಕ 105 ತಲುಪುತ್ತೇವೆ. ಆಗ ರಾಜಕೀಯ ಬದಲವಾಣೆ ಮತ್ತು ದೃವಿಕರಣವಾಗುತ್ತೆ ,ಸಮೀಶ್ರ ಸರ್ಕಾರ ಬಿಳುತ್ತೆ ಎಂದು ಭವಿಷ್ಯ ನುಡಿದರು.

ನಿಜವಾದ ಜೊತಿಷ್ಯರ ಬಳಿ ಹೊಗೋದು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಸ್ವಾಮಿ. ಈ ಹಿಂದೆ ಲೋಕಸಭಾ ಚುನಾವಣೆಯ ತನಕ ಸಂಪುಟ ವಿಸ್ತರಣೆ ಆಗಲ್ಲ ಅಂದಿದ್ದೆ. ಆ ಭವಿಷ್ಯ ನಿಜವಾಗಿದೆಯೋ ಇಲ್ಲವೋ ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಶೆಟ್ಟರ್ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮುಖ್ಯಮಂತ್ರಿ, 24 ಗಂಟೆಯಲ್ಲಿ ಸಾಲ ಮನ್ನ ಆಗುತ್ತೆ ಅಂತರೇ ಮಾಡಲ್ಲ, ನಿಮಗೆ ಸಾಲಮನ್ನ ಮಾಡೋಕೆ ಆಗುತ್ತೋ ಇಲ್ವೋ ಹೇಳಿ ಇನ್ನೊಂದು ವರ್ಷ ಅಂದರೆ ನೀವು ಸಿಎಂ ಹಾಗೀ ಇರಲ್ಲ, ನೀವು ಸಾಲಮನ್ನ ಮಾಡೋಕೆ ನೂರೆಂಟು ಕಂಡೀಷನ್ ಹಾಕಿದ್ದೀರಿ ಸಾಲಮನ್ನ ಸುಮ್ಮನೆ ಘೊಷಣೆ ಮಾಡಿದ್ದೀರಾ ಇದರಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಥ ಕೂಡ ವಾಗ್ದಾಳಿ ಮಾಡಿದ್ದಾರೆ. ಏನು ಮಾಡಿಲ್ಲ ಬರೀ ಬೊಂಬಾಟ, ಬಡಾಯಿ ಕೊಚ್ಚಿಕೊಳ್ಳೋದು ಅಷ್ಟೇ ಜನ ಅವರನ್ನು ತಿರಸ್ಕರ ಮಾಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಜನ ಅವರನ್ನ ಸೋಲಿಸಿ ಮನೆಗೆ ಕಳಿಸಿದ್ದಾರೆ. ಬಾದಾಮಿಯಲ್ಲಿ 1500 ಮತಗಳಿಂದ ಗೆದಿದ್ದಾರೆ ಅಷ್ಟೇ. ಇದಕ್ಕಿಂದ ದೊಡ್ಡ ಅಪಮಾನ ಬೇರಿಲ್ಲ ಸಿದ್ದರಾಮಯ್ಯ ಬಾಯಿ ಮುಚ್ಚಿಕೊಂಡು ಮನೆಯಲ್ಲಿ ಇರಬೇಕಿತ್ತು ಜನರ ಬಳಿ ಹೋಗಲಿಕ್ಕೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ಶಾಸಕ ಶ್ರೀರಾಮುಲ ಮತ್ತು ಮಾಜಿ ಶಾಸಕ ಜನಾರ್ದನ ರೆಡ್ಡಿ ಬಗ್ಗೆ ಹಗರುವಾಗಿ ಮಾತನಾಡೋದು ಸರಿಯಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಎಷ್ಟೋ ಜನರನ್ನು ಜೈಲಿಗೆ ಹಾಕಿದ್ದಾರೆ? ಪದಾಯತ್ರೆ ಸಂದರ್ಭದಲ್ಲಿ ಮಾತನಾಡಿದ ಭಾಷಣವನ್ಬ ತಗೆದುನೋಡಲಿ ನೀವು ಏನು ಮಾತನಾಡಿದ್ದೀರ ಅನ್ನೋವುದು ಗೊತ್ತಾಗುತ್ತೆ ಎಂದರು.

Next Story

RELATED STORIES