800 ಅಡಿ ಪ್ರಪಾತಕ್ಕೆ ಬಿದ್ದು ಭಾರತೀಯ ದಂಪತಿ ಸಾವು

X
TV5 Kannada30 Oct 2018 5:37 AM GMT
ಭಾರತೀಯ ಮೂಲದ ದಂಪತಿ 800 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಯೊಸೆಮಿಟೆ ರಾಷ್ಟ್ರಿಯ ಪಾರ್ಕ್ನಲ್ಲಿ ಸಂಭವಿಸಿದೆ.
29 ವರ್ಷದ ವಿಷ್ಣು ವಿಶ್ವನಾಥ್ ಮತ್ತು 30 ವರ್ಷದ ಮೀನಾಕ್ಷಿ ಮೂರ್ತಿ ಮೃತಪಟ್ಟ ದುರ್ದೈವಿಗಳು. ನ್ಯಾಷನಲ್ ಪಾರ್ಕ್ನ ಅತ್ಯಂತ ಎತ್ತರವಾದ ಟ್ರಾಫ್ಟ್ ಪಾಯಿಂಟ್ ಮೇಲಿಂದ ಬಿದ್ದು ಈ ದುರಂತ ಸಂಭವಿಸಿದೆ.
ಭಾರತೀಯ ಮೂಲದ ದಂಪತಿ ನ್ಯೂಯಾರ್ಕ್ನಲ್ಲಿ ವಾಸವಾಗಿದ್ದು, ಇತ್ತೀಚೆಗೆ ಉದ್ಯೋಗ ಬದಲಿಸಿ ವಾಸಸ್ಥಾನ ಕೂಡ ಬದಲಿಸಿದ್ದರು. ಈ ಬಿಡುವಿನ ವೇಳೆಯಲ್ಲಿ ಅಡ್ವೆಂಚರ್ ಮಾಡುವ ಉದ್ದೇಶದಿಂದ ಪ್ರವಾಸ ಕೈಗೊಂಡಿದ್ದರು.
ಘಟನೆ ನಡೆದ ಎರಡು ದಿನಗಳಾಗಿದ್ದು, ಸೋಮವಾರ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಹೇಗೆ ಸಂಭವಿಸಿತು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಬಗಗ್ಎ ಪರಿಶೀಲನೆ ಮಾಡುತ್ತಿದ್ಧೇವೆ ಎಂದರು.
Next Story