Top

ನಾನು ತಪ್ಪು ಮಾಡಿಲ್ಲ: ಕುಮಾರಸ್ವಾಮಿ

ನಾನು ತಪ್ಪು ಮಾಡಿಲ್ಲ: ಕುಮಾರಸ್ವಾಮಿ
X

ಕುಮಾರ ಬಂಗಾರಪ್ಪ ಮೀಟೂ ಆರೋಪ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ನಾನು ಯಾವುದೇ ತಪ್ಪು ಮಾಡಿಲ್ಲ ಚುನಾವಣೆ ಸಂದರ್ಭ ವಯಕ್ತಿಕ ವಿಚಾರ ಚರ್ಚೆ ಬೇಡ ಎಂದು ಹೇಳಿದ್ದಾರೆ.

ಉಡುಪಿಯ ಬೈಂದೂರಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭ ವೈಯಕ್ತಿಕ ವಿಚಾರ ಚರ್ಚೆ ಮಾಡಲ್ಲ

ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ, ಕುಮಾರ ಬಂಗಾರಪ್ಪನ ಅಭಿರುಚಿ ಪ್ರದರ್ಶನವಾಗಿದೆ. ನಾನು ಈ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ ಚುನಾವಣೆ ಸಂದರ್ಭ ಅಭಿವೃದ್ಧಿ ವಿಚಾರ ಚರ್ಚೆಯಾಗಲಿ ನನಗೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬಂಗಾರಪ್ಪನ ಮಗನಾಗಿ ಕುಮಾರ್ ಬಂಗಾರಪ್ಪ ಏನು ಮಾಡಿದ್ದಾರೆ ಎಂದು ಜಿಲ್ಲೆಯ ಜನರಿಗೆ ಗೊತ್ತೀದೆ , ರಾಜ್ಯಕ್ಕೆ ಕುಮಾರ ಬಂಗಾರಪ್ಪ ನ ಕೊಡುಗೆ ಏನು ಎಂದರೇ ಬಂಗಾರಪ್ಪ ಹೆಸರು ದುರುಪಯೋಗ ಪಡಿಸಿ ಮತ ಕೇಳುವುದು. ಈ ರೀತಿ ಮತ ಕೇಳುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.

ಮಧು ಬಂಗಾರಪ್ಪ ಸ್ಮಾರಕದ ವಿನ್ಯಾಸ ರೆಡಿ ಮಾಡಿದ್ದಾರೆ, ಲೋಕಸಭೆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸುತ್ತಾರೆ ನಮ್ಮ ಪಕ್ಷದವರೆಲ್ಲ ಅವರನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ ಎಂದರು.

Next Story

RELATED STORIES