Top

ಶಾಲಾ ಮಟ್ಟದಲ್ಲೇ ಧರ್ಮ ವಿಭಜನೆಗೆ ಕೈ ಹಾಕಿತಾ ಸರ್ಕಾರ?

ಶಾಲಾ ಮಟ್ಟದಲ್ಲೇ ಧರ್ಮ ವಿಭಜನೆಗೆ ಕೈ ಹಾಕಿತಾ ಸರ್ಕಾರ?
X

ಶಾಲೆಗೆ ಪರಿಶಿಷ್ಟ ಜಾತಿಯ ಮಕ್ಕಳನ್ನು ದಾಖಲಿಸುವಾಗ ಧರ್ಮ ಎಂಬ ಕಾಲಂನಲ್ಲಿ ಹಿಂದೂ ಅಥವಾ ಬೌದ್ಧ ಎಂದು ನಮೂದಿಸುವ ಅವಕಾಶವನ್ನು ಕಲ್ಪಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಸರಕಾರ ಪರೋಕ್ಷವಾಗಿ ಹಿಂದೂ ಧರ್ಮ ವಿಭಜನೆಗೆ ಕೈ ಹಾಕಿದೆಯಾ ಎಂಬ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರು ಹೊರಡಿಸಿದ ಸುತ್ತೋಲೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ಹೊಸ ಬೆಳವಣಿಗೆಯಿಂದ ಅಧಿಕಾರಿಗಳಲ್ಲಿ ಸಹ ಗೊಂದಲ ಉಂಟಾಗಿದೆ.

ಪರಿಶಿಷ್ಟ ಜಾತಿ ಮಕ್ಕಳು ಪ್ರಾಥಮಿಕ ಶಾಲೆ ಪ್ರವೇಶ ಪಡೆಯುವಾಗ ಬೌದ್ಧ ಧರ್ಮ ಎಂದು ನಮೂದಿಸಬಹುದಾಗಿದೆ. ಇದುವರೆಗೂ ಎಲ್ಲಾ ವಿದ್ಯಾರ್ಥಿಗಳು ಧರ್ಮ ಕಾಲಂನಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮುಂತಾದ ಬೇರೆ ಧರ್ಮಗಳನ್ನು ನಮೂದಿಸಲು ಅವಕಾಶವಿತ್ತು. ಆದರೆ ಇದೀಗ ಹೊಸದಾಗಿ ಬೌದ್ಧ ಸೇರ್ಪಡೆಯಾಗಿದೆ.

ಅರ್ಜಿಯಲ್ಲಿ ಧರ್ಮ ಕಾಲಂ ನಲ್ಲಿ ಹಿಂದೂ ಬದಲಾಗಿ ಮಕ್ಕಳ ಪೋಷಕರು ಇಷ್ಟ ಪಟ್ಟರೆ ಬೌದ್ಧಧರ್ಮ ಎಂದು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಪೋಷಕರು ಇಷ್ಟಪಟ್ಟು ಬೌದ್ಧ ಎಂದು ನಮೂದಿಸಿದರೆ ಮುಖ್ಯ ಶಿಕ್ಷಕರು ತಡೆಯಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.

ಪರಿಶಿಷ್ಟ ಜಾತಿ ಮಕ್ಕಳು ಹಿಂದೂ ಧರ್ಮಕ್ಕೆ ಸೇರಿದರೂ ಬೌದ್ದ ಎಂದು ಬರೆದರೆ ಗೊಂದಲ ಸೃಷ್ಟಿಯಾಗಲಿದೆ. ಬೌದ್ದ ಧರ್ಮ ಹಿಂದೂ ಧರ್ಮದಿಂದ ಬೇರೆಯಾಗಿ ಶತಮಾನಗಳೇ ಕಳೆದಿವೆ. ಹೀಗೆ ಬೌದ್ದ ಎಂದು ನಮೂದಿಸಿದರೆ ಪರಿಶಿಷ್ಟ ಜಾತಿ ಮಕ್ಕಳು ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಬಹುದು.

Next Story

RELATED STORIES