Top

ಪತಿವ್ರತೆ ಆಗುತ್ತಿದ್ದಾರೆ: ಮೀಟೂ ಆರೋಪಕ್ಕೆ ನಿರ್ದೇಶಕ ಗುರು ಗರಂ

ಪತಿವ್ರತೆ ಆಗುತ್ತಿದ್ದಾರೆ: ಮೀಟೂ ಆರೋಪಕ್ಕೆ ನಿರ್ದೇಶಕ ಗುರು ಗರಂ
X

ಇಬ್ಬರೂ ನಟಿಯರು ಪತಿವ್ರತೆಯರಾಗಲು ಹೊರಟಿದ್ದಾರೆ ಎಂದು ನಿರ್ದೇಶಕ ಗುರು ಪ್ರಸಾದ್ ಮೀಟೂ ಅಭಿಯಾನದಲ್ಲಿ ಆರೋಪ ಹೊರಿಸಿರುವ ನಟಿಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಕುಷ್ಕಾ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರು ಪತಿವ್ರತೆ ಅಗಲು ಹೋರಾಡತ್ತಿದ್ದಾರೆ. ಯಾವಾಗಲೊ ಆಗಿದ್ದಾಕೆ ಈಗ ಪ್ರತಿಕ್ರಿಯೆಸಿದ್ದು ಸರಿಯಲ್ಲ ಎಂದರು.

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಹಾಗೂ ಚಿರಂಜೀವಿ ಸರ್ಜಾ ವಿರುದ್ಧ ಸಂಗೀತಾ ಭಟ್ ಮೀಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಅವಕಾಶ ಸಿಗುವಾಗ, ಕೆಲಸ ಮಾಡುವಾಗ ಸುಮ್ಮನಿದ್ದು, ಎರಡು ವರ್ಷಗಳ ನಂತರ ಮಾತನಾಡುವುದು ಸರಿಯಲ್ಲ. ಮೀಟೂ ವೇದಿಕೆ ಸಿಕ್ಕಿದೆ ಎಂದು ದುರುಪಯೋಗಪಡಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ಗುರುಪ್ರಸಾದ್ ಹೇಳಿದರು.

ನಟಿಯರು ಅವಕಾಶ ಬೇಕಿದ್ದಾಗ ಯಾವ ರೀತಿ ಇರುತ್ತಾರೆ. ಬೆಳೆದಾಗ ಹೇಗೆ ನಡೆದು ಕೊಳ್ತಾರೆ ಅನ್ನೋದನ್ನು ನಾನು ನೋಡಿದ್ದೇನೆ. ದೊಡ್ಡ ದೊಡ್ಡ ನಟಿಯರ ಜೊತೆನೂ ನಾನು ಕೆಲಸ ಮಾಡಿದ್ದೇನೆ ಎಂದು ಅವರು ನುಡಿದರು.

ನಟಿ ಸಂಗೀತಾ ಭಟ್ ನೀಡಿರುವ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಆಕೆಗೆ ಶೂಟಿಂಗ್ ಸಂದರ್ಭದಲ್ಲಿಯೇ ಎಲ್ಲಾ ಹೇಳಿದ್ದೆವು. ಬೆನ್ನು ತೊರಿಸುವ ದೃಶ್ಯದ ಚಿತ್ರೀಕರಣ ಆಗುವಾಗ ನನ್ನ ಹೆಂಡತಿ ಮತ್ತು ಮಗಳು ಕೂಡ ಇದ್ದರು. ಯಾವುದೇ ರೀತಿಯ ಮುಜುಗರ ಸನ್ನಿವೇಶ ಇರಲಿಲ್ಲ ಎಂದು ಗುರುಪ್ರಸಾದ್ ವಿವರಿಸಿದರು.

ಚಿತ್ರಕಥೆ ಬರೆಯುವಾಗ ನೀನ್ ಫೋಟೋ ಕಳಿಸು ಎಂದು ಹೇಳಿರುವ ಸಂಗೀತಾ ಆರೋಪಕ್ಕೆ ಪ್ರತಿಕ್ರಿಯಿಸಿದ ಗುರು, ಆಕೆ ಯಾರು ಎಂದು ಹೇಳಿಲ್ಲ. ನಾನ್ಯಾಕೆ ಪ್ರತಿಕ್ರಿಯಿಸಲಿ ಎಂದು ಪ್ರಶ್ನಿಸಿದರು.

Next Story

RELATED STORIES