Top

ಡಿಸೆಂಬರ್ 21ಕ್ಕೆ ಡಿಕ್ಕಿ: ಶಾರೂಖ್ ನಿದ್ದೆಗೆಡಿಸಿದ ಯಶ್

ಡಿಸೆಂಬರ್ 21ಕ್ಕೆ ಡಿಕ್ಕಿ: ಶಾರೂಖ್ ನಿದ್ದೆಗೆಡಿಸಿದ ಯಶ್
X

ಕನ್ನಡ ಚಿತ್ರಗಳು ಅಂದರೆ ಮೂಗು ಮುರಿಯುತ್ತಿದ್ದವರು ಇದೀಗ ಮಾರು ಹೋಗುವಂತಾಗಿದೆ. ಮಾರುಕಟ್ಟೆಯೇ ಇಲ್ಲ ಎಂದು ಅಳಲು ತೊಡಿಕೊಳ್ಳುತ್ತಿದ್ದ ಕನ್ನಡಿಗರ ಚಿತ್ರ ನೋಡಿ ಬಾಲಿವುಡ್​ ಕೂಡ ದಂಗಾಗಿದೆ.

ಭಾರೀ ನಿರೀಕ್ಷೆ ಹುಟ್ಟಿಸಿರುವ ಯಶ್ ಅಭಿನಯದ ಕೆಜಿಎಫ್​ ಬಿಡುಗಡೆ ಸಮಯ ಹತ್ತಿರ ಬರುತ್ತಿದ್ದಂತೆ ಅಭಿಮಾನಿಗಳ ಕಾತರ ಕೂಡ ಹೆಚ್ಚಾಗುತ್ತಲೇ ಇದೆ. ಇದೀಗ ಕೆಜಿಎಫ್ ಬಿಡುಗಡೆ ದಿನವೇ ಶಾರೂಖ್ ಖಾನ್ ಅವರ ಬಹು ನಿರೀಕ್ಷಿತ ಜೀರೋ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ.

ಹೌದು, ಕೊನೆಯ ಕ್ಷಣದಲ್ಲಿ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದ ಕೆಜಿಎಫ್ ಈಗ ಡಿಸೆಂಬರ್ 21ರಂದು ಜಗತ್ತಿನಾದ್ಯಂತ ಏಕಕಾಲದಲ್ಲಿ ಬಿಡುಗಡೆ ಆಗುತ್ತಿದೆ. ವಿಶೇಷ ಅಂದರೆ ಶಾರೂಖ್ ಅವರ ಜೀರೋ ಚಿತ್ರ ಕೂಡ ಅದೇ ದಿನ ಬಿಡುಗಡೆ ಆಗುತ್ತಿದೆ. ಕೆಜಿಎಫ್ ಚಿತ್ರದ ಹಿಂದೆ ಬಾಲಿವುಡ್​ನ ಘಟಾನುಘಟಿಗಳೇ ಇರುವುದರಿಂದ ಶಾರೂಖ್ ಖಾನ್ ಬೆಚ್ಚಿಬಿದ್ದಿದ್ದಾರೆ.

ಆನ್​ಲೈನ್ ವೆಬ್ ಪೋರ್ಟಲ್ ರೇಟಿಂಗ್ಸ್​ನಲ್ಲಿ ಈ ಬಾರಿ ಭಾರೀ ನಿರೀಕ್ಷೆಯ ಚಿತ್ರ ಯಾವುದು ಎಂಬ ಸಮೀಕ್ಷೆಯಲ್ಲಿ ಕೆಜಿಎಫ್​ಗೆ 10ರಲ್ಲಿ ಪೂರ್ಣ 10 ಅಂಕ ಗಿಟ್ಟಿಸಿದರೆ, ಜೀರೋ ಚಿತ್ರಕ್ಕೆ 4.5ರಷ್ಟು ಅಂಕ ಲಭಿಸಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಶಾರೂಖ್ ಈ ಚಿತ್ರದ ಯಶಸ್ಸಿಗಾಗಿ ಸಲ್ಮಾನ್ ಖಾನ್ ಅವರನ್ನು ಬಳಸಿಕೊಂಡಿದ್ದರೂ ಭಾರೀ ನಿರೀಕ್ಷೆ ಹುಟ್ಟಿಹಾಕಲು ವಿಫಲವಾಗಿರುವುದು ಆತಂಕ ಹೆಚ್ಚುವಂತೆ ಮಾಡಿದೆ.

ಐದು ಭಾಷೆಯಲ್ಲಿ ತಯಾರಾಗ್ತಿರೋ ಭಾರೀ ಬಜೆಟ್ ಸಿನಿಮಾ ಕೆಜಿಎಫ್, ಟೈಟಲ್ ಲಾಂಚ್ ಆದ ದಿನದಿಂದಲೂ ಸಖತ್ ಸದ್ದು ಮಾಡ್ತಾ ಬರ್ತಿದೆ. ಅದರಲ್ಲೂ ಕೋಲಾರ ಚಿನ್ನದ ಗಣಿಯಲ್ಲಿ ನಡೆಯುವ 70ರ ದಶಕದ ಕಥಾ ಹಂದರ ಹೊಂದಿರುವ ಚಿತ್ರ ಇದಾಗಿದ್ದು, ಯಶ್ ಬೆಲ್​ಬಾಟಂ ಲುಕ್​ ಗೆ ಬಾಲಿವುಡ್ ಬೆಂಡಾಗಿದೆ.

ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್ ನಡಿ ನಿರ್ಮಿಸಿರುವ ಪ್ರಯೋಗಾತ್ಮಕ ಜೀರೊ ಚಿತ್ರ ಶಾರೂಖ್ ಅವರ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ. ಈ ಚಿತ್ರಕ್ಕಾಗಿ ಶಾರೂಖ್ 200 ಕೋಟಿಗೂ ಅಧಿಕ ಮೊತ್ತದ ಬಂಡವಾಳ ಹೂಡಿದ್ದಾರೆ. ಆದರೆ ಸುಮಾರು 60ರಿಂದ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕೆಜಿಎಫ್ ಈ ಪರಿ ನಿರೀಕ್ಷೆ ಹುಟ್ಟಿಸಿರುವುದು ಶಾರೂಖ್ ಖಾನ್ ನಿದ್ದೆಗೆಡಿಸಿದೆ.

Next Story

RELATED STORIES