Top

ರಾಜಕೀಯವಾಗಿ ಮುಗಿಸಲು ಯತ್ನ: ಕುಮಾರಸ್ವಾಮಿ ಆರೋಪ

ರಾಜಕೀಯವಾಗಿ ಮುಗಿಸಲು ಯತ್ನ: ಕುಮಾರಸ್ವಾಮಿ ಆರೋಪ
X

ನನ್ನನ್ನು ರಾಜಕೀಯವಾಗಿ ಹಂತ ಹಂತವಾಗಿ ಮುಗಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಪ್ರಯತ್ನ ನಡೆಸಿದ್ದರು ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾ ನನ್ನ ಬಳಿ ಬಂದವರು ನೀವು. ನಾನೇನು ನಿಮ್ಮ ಬಳಿ ಬಂದಿದ್ದೇನಾ? ಬಿಜೆಪಿ ತೊರೆದು ಬರೋದಕ್ಕೂ ನೀವು ರೆಡಿಯಾಗಿದ್ದಿರಿ ಎಂದು ಕುಮಾರಸ್ವಾಮಿ ಹೇಳಿದರು.

ಇದಕ್ಕೂ ಮುನ್ನ ಬಳ್ಳಾರಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಉಪ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಇಲ್ಲಿನ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದರು.

ಎರಡೂ ಪಕ್ಷಗಳು ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಐದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಒಟ್ಟಾಗಿ ಹೋರಾಟ ಮಾಡುವುದಷ್ಟೇ ನಮ್ಮ ಗುರಿ. ಕಾಂಗ್ರೆಸ್ ಜೆಡಿಎಸ್ ಪಕ್ಷದ ಮುಖಂಡರು ಸೇರಿ ಆಭ್ಯರ್ಥಿಗಳ ಆಯ್ಕೆ ಮಾಡಿದ್ದೇವೆ. ಉಪ ಚುನಾವಣೆ ಎಂದು ನಾವು ಕೆಲಸ ಮಾಡ್ತಿಲ್ಲ, ಸಾರ್ವತ್ರಿಕ ಚುನಾವಣೆ ಅಂಥಾ ಕೆಲಸ ಮಾಡುತ್ತಿದ್ದೇವೆ ಎಂದರು.

ದೇಶದಲ್ಲಿ 13 ಕಡೆ ಉಪ ಚುನಾವಣೆಯಲ್ಲಿ 12 ಬಿಜೆಪಿಯೇತರ ಪಕ್ಷಗಳು ಗೆದ್ದಿದೆ ಬಿಜೆಪಿಯನ್ನೂ ದೂರವಿಡಲು ದೇಶದಲ್ಲಿ ಕಾಂಗ್ರೆಸ್ ಜೋತೆ ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದೇವೆ. ಈ ಭಾರೀ ಬಳ್ಳಾರಿ. ಶಿವಮೊಗ್ಗ. ಮಂಡ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕೆಂದು. ಕೆಲಸ ಮಾಡ್ತಿದ್ದೇವೆ ಎಂದು ಮಾತನಾಡಿದರು.

ಕಾಂಗ್ರೆಸ್ ಆಭ್ಯರ್ಥಿ ಉಗ್ರಪ್ಪ ದಕ್ಷ ಪ್ರಾಮಾಣಿಕ ವ್ಯಕ್ತಿ, ಹೀಗಾಗಿ ಜೆಡಿಎಸ್ ಮುಖಂಡರ ಜೊತೆ ಚರ್ಚೆ ನಡೆಸಿ ಕಾಂಗ್ರೆಸ್​ಗೆ ಬೆಂಬಲಿಸಲು ಸೂಚಿಸಿದ್ದೇನೆ. ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಡಿ ಕೆ ಶಿವಕುಮಾರ್ ಶಕ್ತಿ ಬಳಸಿ ಕೆಲಸ ಮಾಡುತ್ತೀದ್ದರೆ. ಕಾಂಗ್ರೇಸ್ ಪಕ್ಷದ ಮುಖಂಡರೆಲ್ಲ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇನ್ನೂ ವಾಲ್ಮೀಕಿ ಪ್ರಶಸ್ತಿ ಪಡೆದಿಲ್ಲ ಎನ್ನುವ ಆರೋಪಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ನಾನು ಸಭೆಗೆ ತೆರಳಿ ಮಾಹಿತಿ ನೀಡಿದ್ದೆ. ಬಿಜೆಪಿ ಸಹಿಸಲಾರದೆ ಆರೋಪ ಮಾಡ್ತಿದೆ. ಮೋದಿ ಅವರ ಸರ್ಕಾರ ತೆಗೆಯಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ರಾಹುಲ್ ಗಾಂಧಿ ಬಗ್ಗೆ ಮಾತನಾಡಲ್ಲ.ಆದರೆ ರಾಹುಲ್​ಗಾಂಧಿ ಪ್ರಧಾನಿ ವಿಚಾರದಲ್ಲಿ ನನ್ನ ಬೆಂಬಲವಿದೆ ಎಂದು ಕುಮಾರಸ್ವಾಮಿ ಹೇಳಿದರು.

Next Story

RELATED STORIES