Top

ಗಂಡು ಮಗುವಿಗೆ ಜನ್ಮ ನೀಡಿದ ಸಾನಿಯಾ ಮಿರ್ಜಾ

ಗಂಡು ಮಗುವಿಗೆ ಜನ್ಮ ನೀಡಿದ ಸಾನಿಯಾ ಮಿರ್ಜಾ
X

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್​ಗೆ ಗಂಡು ಮಗು ಜನಿಸಿದೆ. ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

ಶೋಯೆಬ್ ಮಲಿಕ್ ಮಂಗಳವಾರ ಬೆಳಗ್ಗೆ ಟ್ವೀಟರ್​ನಲ್ಲಿ ಈ ಸಂತಸವನ್ನು ಹಂಚಿಕೊಂಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

ಈ ವಿಷಯ ಪ್ರಕಟಿಸುವುದಕ್ಕೆ ತುಂಬಾ ಖುಷಿಯಾಗಿದೆ. ಗಂಡು ಮಗು. ನನ್ನ ಹುಡುಗಿ ಚೆನ್ನಾಗಿ ಹಾಗೂ ಎಂದಿನಂತೆ ಧೈರ್ಯವಾಗಿ ಇದ್ದಾಳೆ. ನಿಮ್ಮೆಲ್ಲಾ ಹಾರೈಕೆ ಹಾಗೂ ಆಶೀರ್ವಾದಗಳಿಗೆ ನಾನು ಚಿರಋಣಿ ಎಂದು ಶೋಯೆಬ್ ಮಲಿಕ್ ಹೇಳಿದ್ದಾರೆ.

ಚಿತ್ರ ನಿರ್ದೇಶಕಿ ಹಾಗೂ ಕೋರಿಯೋಗ್ರಾಫರ್ ಫರ್ಹಾ ಖಾನ್, ಈ ವಿಷಯವನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಶುಭ ಕೋರಿದ್ದಾರೆ.

Next Story

RELATED STORIES