Top

ಬೀದಿನಾಯಿಗಳ ಕಡಿವಾಣಕ್ಕೆ ವಿಷ ಹಾಕಿದ ಅಪರಿಚಿತ

ಬೀದಿನಾಯಿಗಳ ಕಡಿವಾಣಕ್ಕೆ ವಿಷ ಹಾಕಿದ ಅಪರಿಚಿತ
X

ಬೀದಿನಾಯಿಗಳಿಗೆ ಅಪರಿಚಿತ ವ್ಯಕ್ತಿಗಳು ಆಹಾರದಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್​​ನಲ್ಲಿ ನಡೆದಿದೆ.

ಭಾನುವಾರ ಸಂಜೆ ಕಾರಿನಲ್ಲಿ ಬಂದ ಅಪರಿಚಿತರು ಬಿಟಿಎಂ ಎರಡನೇ ಹಂತ 26 ಕ್ರಾಸ್​ನಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿ ಹೋಗಿದ್ದರು. ಅದನ್ನು ತಿಂದ ನಾಯಿಗಳು ಅಲ್ಲಿಂದ ವಿವಿಧ ಕಡೆಗಳಿಗೆ ಹೋಗಿದ್ದವು. ಆದರೆ ಒಂದು ಬೀದಿ ನಾಯಿ ಅಸ್ವಸ್ಥವಾಗಿ ಬೀದಿಯಲ್ಲಿ ಬಿದ್ದು ನರಳಾಡುತ್ತಿತ್ತು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪ್ರಾಣಿ ದಯಾ ಸಂಘದ ಸದಸ್ಯರು, ಅಸ್ವಸ್ಥಗೊಂಡ ನಾಯಿಗೆ ದೊಮ್ಮಲೂರಿನ ಸಿಸ್ನ ಪ್ರಾಣಿದಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಮತ್ತೊಂದು ಕಡೆ ಹತ್ತಾರು ನಾಯಿಗಳ ಸ್ಥಿತಿ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಘಟನೆ ಬಳಿಕ ಮೈಕೊಲೇಔಟ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಘಟನ ಸ್ಥಳದಲ್ಲಿ ದೊರೆತ ವಿಷ ಆಹಾರವನ್ನು ಲ್ಯಾಬ್​ ಕಳುಹಿಸಲಾಗಿದೆ.

Next Story

RELATED STORIES