ಅಯೋಧ್ಯೆ ಭೂವಿವಾದ: ಜನವರಿಯಲ್ಲಿ ವಿಚಾರಣೆ

X
TV5 Kannada29 Oct 2018 6:54 AM GMT
ಅಯೋಧ್ಯೆಯಲ್ಲಿನ ರಾಮಮಂದಿರ ಭೂ ವಿವಾದ ಕುರಿತ ವಿಚಾರಣೆಯನ್ನು ಸೂಕ್ತ ಪೀಠ ಕೈಗೆತ್ತಿಕೊಳ್ಳಲಿದ್ದು, ಜನವರಿಯಲ್ಲಿ ವಿಚಾರಣೆ ಆರಂಭವಾಗಲಿದೆ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣದ ಜಾಗವನ್ನು ಮೂರು ಭಾಗ ಮಾಡಿ 2010ರಲ್ಲಿ ಅಲಹಬಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ಕುರಿತು ಅರ್ಜಿ ಪರಿಶೀಲಿಸಿದ ನಂತರ ಕೇವಲ 4 ನಿಮಿಷಗಳಲ್ಲಿ ತಮ್ಮ ನಿಲುವನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಪ್ರಕಟಿಸಿದರು.
ಸಾರ್ವತ್ರಿಕ ಚುನಾವಣೆಗೆ ಸಾಕಷ್ಟು ಸಮಯ ಇದೆ. ಹಾಗಾಗಿ ತರಾತುರಿಯಲ್ಲಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ಅಲ್ಲದೇ ಈ ಪ್ರಕರಣದ ಕುರಿತು ವಿಚಾರಣೆ ಯಾವಾಗ ವಿಚಾರಣೆ ಆರಂಭಿಸಬೇಕು ಎಂಬುದನ್ನು ಸೂಕ್ತ ಪೀಠ ನಿರ್ಧರಿಸಲಿದೆ ಎಂದು ಎಂದು ನ್ಯಾಯಮೂರ್ತಿ ತಿಳಿಸಿದರು.
ಇದರೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹಾತೊರೆಯುತ್ತಿರುವ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳಿಗೆ ಹಿನ್ನಡೆ ಉಂಟಾದಂತಾಗಿದೆ.
Next Story