Top

ಪಂಚೆ ಎತ್ತಿಕಟ್ಟೋಕೆ ಅಂತಾನೆ ಪ್ರಧಾನಿ ಆದರು: ದೇವೇಗೌಡರಿಗೆ ಸಿಟಿ ರವಿ ಟಾಂಗ್​

ಪಂಚೆ ಎತ್ತಿಕಟ್ಟೋಕೆ ಅಂತಾನೆ ಪ್ರಧಾನಿ ಆದರು: ದೇವೇಗೌಡರಿಗೆ ಸಿಟಿ ರವಿ ಟಾಂಗ್​
X

ನಮ್ಮಲ್ಲಿ ಯಾರೂ ಬೇಕಾದರೂ ಪ್ರಧಾನಿ ಆಗುತ್ತಾರೆ. ಕೆಲವರು ಅದೃಷ್ಟದ ಮೇಲೆ ಪ್ರಧಾನಿ ಆದರೆ ಇನ್ನು ಕೆಲವರು ಪಂಚೆ ಎತ್ತಿ ಕಟ್ಟೋಕೆ ಎಂದೇ ಪ್ರಧಾನಿ ಆಗುತ್ತಾರೆ ಎಂದು ಮಾಜಿ ಸಚಿವ ಬಿಜೆಪಿಯ ಸಿಟಿ ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬಾಗಲಕೋಟೆಯ ಜಮುಖಂಡಿಯಲ್ಲಿ ಸೋಮವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶಾಸಕ ಸಿ.ಟಿ. ರವಿ, ಕೆಲವರು ಹುಟ್ಟಿನಿಂದಲೇ ವಾರಸದಾರಿಕೆ ಮೂಲಕ ಪ್ರಧಾನಿ ಆಗಲು ಹೊರಡ್ತಾರೆ. ಆದರೆ ಅತ್ಯಂತ ಕೆಳವರ್ಗದಿಂದ ಯೋಗ್ಯತೆ ‌ಆಧಾರದ ಮೇಲೆ ಚರಿತ್ರೆಯ ಭಾಗವಾಗಿದ್ದು ನರೇಂದ್ರ ಮೋದಿ ಎಂದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದನದ ಮಾಂಸ ತಿನ್ನುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಟಿ ರವಿ, ನಾನು ಕುರುಬ ಅನ್ನೋದು, ಮತ್ತೆ ನಾನು ದನದ ಮಾಂಸ ತಿಂತಿನಿ ಅನ್ನೋದು ಏಕಕಾಲಕ್ಕೆ ಸಾಧ್ಯನಾ? ನಮ್ಮ ರಾಜ್ಯದಲ್ಲಿ ಅಲ್ಲ ನಮ್ಮ ದೇಶದಲ್ಲೇ ಯಾವ ಕುರುಬರು ದನ ತಿನ್ನಲ್ಲ. ಇವರು ಕುರುಬರಾದರೆ ದನ ತಿನ್ನೋ ಮಾತನಾಡಬಾರದು ಎಂದು ರವಿ ನುಡಿದರು.

ಸಂವಿಧಾನದಲ್ಲಿ ಗೋ ಭಕ್ಷಣೆಗೆ ಅವಕಾಶವಿಲ್ಲ. ಅಂಬೇಡ್ಕರ್ ಸಂವಿಧಾನದ ಮೇಲೆ ನಂಬಿಕೆ ಇಟ್ಟವರು. ಗೋಮಾಂಸ ತಿನ್ನಬಾರದು. ಗೋ‌ ಪೂಜೆ ಮಾಡುವ ವಂಶದಲ್ಲಿ ಹುಟ್ಟಿದೋರು ಗೋಹತ್ಯೆ, ಗೋಮಾಂಸ ಭಕ್ಷಣೆ ಬಗ್ಗೆ ಮಾತನಾಡಬಾರದು ಎಂದರು.

Next Story

RELATED STORIES