Top

ಸಮುದ್ರದಲ್ಲಿ ವಿಮಾನ ಪತನ: 189 ಸಾವು

ಸಮುದ್ರದಲ್ಲಿ ವಿಮಾನ ಪತನ: 189 ಸಾವು
X

189 ಪ್ರಯಾಣಿಕರನ್ನು ಹೊತ್ತು ಟೇಕಾಫ್​ ವಿಮಾನ ಆದ ಕೆಲವೇ ಕ್ಷಣಗಳಲ್ಲಿ ಸಮುದ್ರದಲ್ಲಿ ಪತನಗೊಂಡ ದಾರುಣ ಘಟನೆ ಇಂಡೋನೇಷ್ಯಾದ ದ್ವೀಪ ಜಾವಾದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಜಕಾರ್ತದಿಂದ ಬೆಳಗ್ಗೆ 6.33ಕ್ಕೆ ಹೊರಟ ಲಿಯೊನ್ ಏರ್​ ಫ್ಲೈಟ್ ವಿಮಾನ ಟೇಕಾಫ್ ಆದ 13 ನಿಮಿಷದಲ್ಲಿ ಸಮುದ್ರದಲ್ಲಿ ಪತನಗೊಂಡಿದೆ. ವಿಮಾನ ಪತನ ಆಗುತ್ತಿರುವ ದೃಶ್ಯ ಗಮನಿಸುತ್ತಿದ್ದಂತೆ ದಡದಲ್ಲಿದ್ದ ಬೋಟ್ ಗಳು ರಕ್ಷಣೆಗೆ ಧಾವಿಸಿವೆ ಎಂದು ಇಂಡೋನೇಷ್ಯಾದ ಪರಿಶೀಲನೆ ಹಾಗೂ ರಕ್ಷಣಾ ಪಡೆ ವಕ್ತಾರ ತಿಳಿಸಿದ್ದಾರೆ.

ಸಮುದ್ರದಲ್ಲಿ ವಿಮಾನ ಪತನಗೊಂಡಿದ್ದರಿಂದ ಯಾರಾದರೂ ಬದುಕುಳಿದಿದ್ದಾರಾ ಎಂಬುದು ತಿಳಿದಿಲ್ಲ. ಆದರೆ ವಿಮಾನ ದುರ್ಘಟನೆ ಆಗಿರುವುದು ಮಾತ್ರ ಖಚಿತ ಎಂದು ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Next Story

RELATED STORIES