Top

ರೆಡ್ಡಿ ಸವಾಲಿಗೆ ರೆಡಿ ಎಂದ ಡಿಕೆಶಿ

ರೆಡ್ಡಿ ಸವಾಲಿಗೆ ರೆಡಿ ಎಂದ ಡಿಕೆಶಿ
X

ಬಳ್ಳಾರಿ ಅಭಿವೃದ್ಥಿ ವಿಚಾರದಲ್ಲಿ ಮಾಜಿ ಸಚಿವ ಜನಾರ್ದನ್ ರೆಡ್ಡಿ ಹಾಕಿರುವ ಬಹಿರಂಗ ಚರ್ಚೆಯ ಸವಾಲಿಗೆ ನಾನು ಸಿದ್ಧನಿದ್ದೇನೆ. ಎಲ್ಲಿಗೆ ಬೇಕಾದರೂ ಕರೆದರೂ ಚರ್ಚೆಗೆ ಹೋಗಲು ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚೆಗೆ ಯಾರೂ ಬೇಕಾದರೂ ಬರಲಿ. ದೊಡ್ಡ ದೊಡ್ಡವರೇ ಬರಲಿ ಪರವಾಗಿಲ್ಲ. ಚುನಾವಣೆಯಲ್ಲಿ ಇದನ್ನೆಲ್ಲ ನೋಡಿದ್ದೇನೆ. ನಾನು ಈ ಸವಾಲನ್ನು ಸ್ವೀಕರಿಸುತ್ತೇನೆ. ಬಹಿರಂಗ ಚರ್ಚೆಗೆ ಬರುತ್ತೇನೆ. ಅಭಿವೃದ್ಥಿ ವಿಚಾರದಲ್ಲಿ ನಮ್ಮ ಪಕ್ಷ ಹೆಚ್ಚಿನ ಕೆಲಸ ಮಾಡಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲ ನಡೆಯುತ್ತಲೇ ಇರುತ್ತೆ. ಯಾರೂ ಬೇಕಾದರೂ ಕರೆಸಿಕೊಳ್ಳಲಿ. ಹೊಸದಾಗಿ ತಿದ್ದಲಂತೂ ಆಗುವುದಿಲ್ಲ. ಆದರೆ ರಾಜ್ಯದ ಜನರಿಗೆ ಗೊತ್ತಿದೆ ಬಳ್ಳಾರಿ ಜಿಲ್ಲೆಯನ್ನು ಹಾಳು ಮಾಡಿದ್ದು ಯಾರು ಅಂತ. ಈ ಬಗ್ಗೆ ಮಾತನಾಡುವ ಹಕ್ಕು ಕಳೆದುಕೊಂಡವರೆಲ್ಲ ಮಾತನಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಶ್ರೀರಾಮುಲು ಮತ್ತು ಬಳ್ಲಾರಿ ಜಿಲ್ಲೆಯನ್ನು ಏಕಾಂಗಿ ಮಾಡಿದ. ಜನರ್ದಾನ ರೆಡ್ಡಿ ಈವಾಗ ಹಾಳು ಮಾಡುತ್ತಿದ್ದಾರೆ. ಶ್ರೀರಾಮುಲು ಅಭಿವೃದ್ಥಿ ಬಗ್ಗೆ ಅಂಕಿ ಅಂಶಗಳ ಸಮೇತ ಮಾತನಾಡುತ್ತಾನೆ ಎಂದು ಹೇಳುತ್ತಾರೆ. ಅವರು ಏನೇ ಸವಾಲು ನೀಡಿದರೂ ನಾನು ಎದುರಿಸಲು ಸಿದ್ದ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Next Story

RELATED STORIES