Top

ಬಿಜೆಪಿ ವಿರುದ್ಧ ನಾಲಗೆ ಹರಿಯಬಿಟ್ಟ ಮಾಜಿ ಸಚಿವ

ಬಿಜೆಪಿ ವಿರುದ್ಧ ನಾಲಗೆ ಹರಿಯಬಿಟ್ಟ ಮಾಜಿ ಸಚಿವ
X

ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ಕಲಬುರಗಿಯ ಅಡಗಿ ಜಿಲ್ಲಾ ಪಂಚಾಯತ್ ಉಪ ಚುನಾವಣೆಯಲ್ಲಿ ಸ್ಥಳೀಯರನ್ನು ಉದ್ದೇಶಿಸಿ ಮಾತನಾಡುವಾಗ ನಾಲಗೆ ಹರಿಯಬಿಟ್ಟಿದ್ದಾರೆ. ಬಿಜೆಪಿ ಪಕ್ಷ ಹಾಗೂ ಆ ಪಕ್ಷದ ಮುಖಂಡರನ್ನು ಅಶ್ಲೀಲ ಪದಗಳಿಂದ ನಿಂದಿಸಿರುವ ವೀಡೀಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

ಬಿಜೆಪಿಯವರು ಮಾಡೋದೆಲ್ಲ ಬರೀ ಪುಂಡಪೋಕರಿಗಳಿಗೆ ಕುಡಿಸಿ ಊರಲ್ಲಿ ಗಲಾಟೆ ಮಾಡಿಸುವುದೇ ಕೆಲಸ. ಧೈರ್ಯ ಇದ್ದರೆ ಎದುರು ಬಂದು ಮಾತನಾಡಲಿ ನೋಡುತ್ತೀನಿ. ಕೆಲಸ ಮಾಡೋದಕ್ಕೆ ಆಗಲ್ಲ ಬರೀ ಮಾತನಾಡುತ್ತಾರೆ ಎಂದು ಶರಣ ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಕೆಲವೊಂದು ಸಂಕಲ್ಪ ಮಾಡಿದೆ. ಹಾಗಾಗಿ ನೀವು ಬದುಕುಳಿದಿದ್ದಾರ ಇಲ್ಲವಾಗಿದ್ದರೆ ನಾಯಿನೂ ತಿನ್ನದಂತಹ ಪರಿಸ್ಥಿತಿಗೆ ಬರುತ್ತಿದ್ದಿರಿ ಎಂದು ಶರಣ ಪಾಟೀಲ್ ಕೆಟ್ಟ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

Next Story

RELATED STORIES