ಮೊದಲ ಪತ್ನಿಯಿಂದ ವಿಚ್ಚೇದನ ಕೋರಿದ ದುನಿಯಾ ವಿಜಿ

X
TV5 Kannada29 Oct 2018 12:51 PM GMT
ನಟ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಕೂಡ ದುನಿಯಾ ವಿಜಯ್ ಪತ್ನಿ ನಾಗರತ್ನ ವಿಚ್ಚೇದನ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಧೀಶರ ಸಲಹೆ ಮೇರೆಗೆ ವಿಚ್ಛೇದನ ಅರ್ಜಿ ವಾಪಸ್ ಪಡೆದಿದ್ದರು.
ಇತ್ತೀಚೆಗೆ ಕೀರ್ತಿ ಗೌಡ ಮೇಲೆ ಹಲ್ಲೆ ಹಾಗೂ ಇನ್ನಿತರ ಬೆಳವಣಿಗೆ ಹಿನ್ನೆಲೆಯಲ್ಲಿ ದುನಿಯಾ ವಿಜಿ ನಾಗರತ್ನರಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ದುನಿಯಾ ವಿಜಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕೌಟುಂಬಿಕ ಕೋರ್ಟ್ ನಲ್ಲಿ ವಿಚ್ಚೇದನ ಅರ್ಜಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ದುನಿಯಾ ವಿಜಯ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಇನ್ನು ಮುಂದೆ ಹೊಂದಾಣಿಕೆ ಜೀವನ ಸಾಧ್ಯವಿಲ್ಲ. ಆಕೆಗೆ ಶಿಕ್ಷೆ ಆಗಲೇಬೇಕು. ಮಕ್ಕಳಾದ ಮೋನಿಕಾ ಮೋನಿಷಾಗೆ ಒಳ್ಳೆಯದಾಗಲಿ. ಆವತ್ತು ಮನೇಲಿ ಯಾರೂ ಇಲ್ಲದೇ ಇದ್ದಿದ್ದರೆ ಕೀರ್ತಿಗೌಡ ಕೊಲೆಯೇ ಆಗುತ್ತಿತ್ತು ಎಂದು ವಿಜಯ್ ಹೇಳಿದ್ದಾರೆ.
Next Story