Top

4ನೇ ಏಕದಿನ: ತಿರುಗೇಟು ನೀಡಲು ಕೊಹ್ಲಿ ಪಡೆ ಕಾತರ

4ನೇ ಏಕದಿನ: ತಿರುಗೇಟು ನೀಡಲು ಕೊಹ್ಲಿ ಪಡೆ ಕಾತರ
X

ಮೊದಲ ಪಂದ್ಯದಲ್ಲಿ ಜಯ.. ಎರಡನೇ ಪಂದ್ಯ ಟೈ.. ಮೂರನೇ ಪಂದ್ಯದಲ್ಲಿ ಆಘಾತ.. ಹೀಗೆ ರಾಯರ ಕುದುರೆ ಬರುಬರುತ್ತಾ ಕಥೆಯಾಯ್ತು ಎಂಬಂತೆ ಸೋಲಿನ ಹಾದಿ ಹಿಡಿದಿರುವ ಭಾರತ ತಂಡ ಸರಣಿ ಗೆಲ್ಲಬೇಕಾದರೆ ಸೋಮವಾರ ನಡೆಯುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ.

ಮುಂಬೈನ ಬಾರ್ಬಡಾಸ್​ನಲ್ಲಿ ಸೋಮವಾರ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದೆ. ಭಾರತ ಮತ್ತು ವಿಂಡೀಸ್ ತಂಡ ಈಗಾಗಲೇ 1-1ರಿಂದ ಸಮಬಲದಲ್ಲಿದೆ. ಒಂದು ವೇಳೆ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಜಯ ಗಳಿಸಿದರೆ ಸರಣಿ ಸೋಲಿನ ಭೀತಿಯಿಂದ ಪಾರಾಗಲಿದೆ. ಭಾರತದ ಸ್ಥಿತಿಯೂ ಇದೇ ಆಗಿದೆ.

ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದರಿಂದ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಆದರೂ ಬ್ಯಾಟಿಂಗ್ ಕೈಕೊಟ್ಟಿತು. ತಂಡಕ್ಕೆ ಹೆಚ್ಚು ಚಿಂತೆಗೀಡು ಮಾಡಿರುವ ಮಧ್ಯಮ ಕ್ರಮಾಂಕ ಮತ್ತೆ ವೈಫಲ್ಯ ಅನುಭವಿಸುತ್ತಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ವೈಫಲ್ಯ ಅಭಿಮಾನಿಗಳನ್ನು ತೀವ್ರ ನಿರಾಸೆಗೊಳಪಡಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಬಂದ ಅಂಬಟಿ ರಾಯ್ಡು, ಧೋನಿ, ರಿಷಭ್ ಪಂತ್ ಕೂಡ ಎಡವಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ತಂಡಕ್ಕೆ ತಂಡದ ಬ್ಯಾಟಿಂಗ್ ದೊಡ್ಡ ಶಕ್ತಿಯಾಗಿದ್ದಾರೆ. 300ಕ್ಕೂ ಹೆಚ್ಚು ರನ್‍ ಗಳಿಸಿರುವ ಶಾಯಿ ಹೋಪ್, ಕೆಳ ಕ್ರಮಾಂಕದಲ್ಲಿ ಆಶ್ಲೆ ನರ್ಸ್ ಮತ್ತು ಕೆಮರ್ ರೋಚ್ ತಂಡದ ಸ್ಕೋರ್ ಹೆಚ್ಚಿಸುತ್ತಾ ಬಂದಿದ್ದಾರೆ.

Next Story

RELATED STORIES