ಪ್ರಚಾರಕ್ಕಿಳಿಯದ ಎಸ್.ಎಂ. ಕೃಷ್ಣ, ಅಂಬರೀಶ್: ಪಕ್ಷಗಳಿಂದ ಕಡೆಗಣನೆ?

ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ ಹಾಗೂ ಅಂಬರೀಶ್ ಪ್ರಚಾರಕ್ಕೆ ಇಳಿಯದೇ ಇರುವುದು ಸ್ಥಳೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಹಿರಿಯ ಮುಖಂಡ ಎಸ್ ಎಂ ಕೃಷ್ಣ ಅವರನ್ನು ಬಿಜೆಪಿ ಪಕ್ಷ ಮತ್ತೆ ಕಡೆಗಣಿಸಿದ್ದು ಸ್ಥಳೀಯ ಅಭ್ಯರ್ಥಿ ಪರ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಮತ್ತೊಂದೆಡೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಟ ಅಂಬರೀಷ್ ಕೂಡ ಪ್ರಚಾರದಿಂದ ದೂರ ಉಳಿದಿದ್ದಾರೆ.
ಈ ಇಬ್ಬರೂ ನಾಯಕರು ತಟಸ್ಥರಾಗಿರುವುದರಿಂದ ಮೈತ್ರಿಕೂಟದ ಅಭ್ಯರ್ಥಿಯಾದ ಎಲ್.ಆರ್.ಶಿವರಾಮೇಗೌಡ ಮತಗಳಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಶಿವರಾಮೇಗೌಡ, ಅಂಬರೀಶ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಅಂಬರೀಶ್ ಪ್ರಚಾರದಿಂದ ದೂರ ಉಳಿದಿದ್ದಾರೆ.
ಮಂಡ್ಯ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ಇದೇ ಮೊದಲ ಬಾರಿಗೆ ಎಸ್.ಎಂ.ಕೃಷ್ಣ , ಪ್ರಚಾರದಿಂದ ಹಿಂದೆ ಸರಿದಿದ್ದು. ಎಸ್.ಎಂ.ಕೆ ಈ ಭಾರೀ ಬಿಜೆಪಿ ಪಕ್ಷದ ಆಭ್ಯರ್ಥಿಯನ್ನು ಕೂಡ ಭೇಟಿ ಮಾಡಿಲ್ಲ.ಈ ಹಿಂದಿನ ಎರಡು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿದ್ದ ಎಸ್.ಎಂ.ಕೃಷ್ಣರ ಒಂದೇ ಒಂದು ಹೇಳಿಕೆ ಅಭ್ಯರ್ಥಿಗಳಾಗಿದ್ದ ಅಂಬರೀಶ್ ಹಾಗೂ ರಮ್ಯಾ ಸೋಲಿಗೆ ಕಾರಣವಾಗಿದ್ದವು. ಇನ್ನೂ ಈ ಭಾರೀ ಬಿಜೆಪಿ ಅವರು ಲೋಕಸಭೆ ಚುನಾವಣೆಯಿಂದ ಎಸ್. ಎಂ. ಕೃಷ್ಣರನ್ನು ಕಡೆಗಣಿಸಿದ್ದು ಲೋಕಸಭೆ ಚುನಾವಣೆ ಬಿಜೆಪಿಗೆ ಕಷ್ಟವಾಗುವ ಎಲ್ಲಾ ಸಾಧ್ಯತೆ ಇದೆ.
ಮಂಡ್ಯದ ಗಂಡು ಎಂದು ಕರೆಯುವ ಅಂಬರೀಶ್ರನ್ನು ಈ ಭಾರೀ ಲೋಕಸಭಾ ಉಪಚುನಾವಣೆ ಪ್ರಚಾರಕ್ಕೆ ಕರೆತರಲು ಕಾಂಗ್ರೆಸ್ ವಿಫಲವಾಗಿದೆ.ಹೀಗಾಗಿ ಬಿಜೆಪಿ ಪಕ್ಷದವರಿಗೆ ಮತ ಸೆಳೆಯಲೂ ಸುಲಭವಾಗುವ ಎಲ್ಲಾ ಸದ್ಯತೆ ಇದೆ.
ಮಂಡ್ಯದಿಂದ ಒಂದು ಭಾರೀ ಗೆದ್ದು ಸಂಸದೆ ಹಾಗಿದ್ದ ರಮ್ಯ ಸಹ ಮಂಡ್ಯ ಲೋಕಸಭಾ ಉಪಚುನಾವಣೆಯಿಂದ ನಾಪತ್ತೆ ಹಾಗಿದ್ದರೆ.