Top

ಮೀಟೂನಲ್ಲಿ ಸಿಕ್ಕಿ ಹಾಕಿಕೊಂಡರಾ ಸರ್ಜಾ ಕುಟುಂಬದ ಮತ್ತೊಬ್ಬ ನಟ?

ಮೀಟೂನಲ್ಲಿ ಸಿಕ್ಕಿ ಹಾಕಿಕೊಂಡರಾ ಸರ್ಜಾ ಕುಟುಂಬದ ಮತ್ತೊಬ್ಬ ನಟ?
X

ಮಿಟೂ ಅಭಿಯಾನದಲ್ಲಿ ಇತ್ತಿಚೆಗೆ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಹೊರಿಸಿದ್ದ ಆರೋಪ ಭಾರೀ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಅರ್ಜುನ್ ಸರ್ಜಾ ಕುಟುಂಬದ ಇನ್ನೊಬ್ಬ ನಟನ ವಿರುದ್ಧವೂ ಮಿಟೂ ಆರೋಪ ಕೇಳಿಬಂದಿದೆ.

ಇತ್ತೀಚೆಗಷ್ಟೇ ಮೀಟೂ ಅಭಿಯಾನದಲ್ಲಿ ತಮಗೂ ಕಿರುಕುಳ ಆಗಿದೆ ಎಂದು ಹೇಳಿಕೊಂಡಿದ್ದ ನಟಿ ಸಂಗೀತಾ ಭಟ್ ಫೇಸ್ ಬುಕ್​ನಲ್ಲಿ ತಮಗೂ ಲೈಂಗಿಕ ಕಿರುಕುಳ ನೀಡಿದ ನಟ ಅರ್ಜುನ್ ಸರ್ಜಾ ಕುಟುಂಬ ಮತ್ತೊಬ್ಬ ನಟ ಎಂದಿದ್ದಾರೆ. ಹೆಸರು ಎಲ್ಲೂ ಉಲ್ಲೇಖಿಸದೇ ಇದ್ದರೂ ಅದು ಚಿರಂಜೀವಿ ಸರ್ಜಾ ಇರಬಹುದಾ ಎನ್ನುವ ಅನುಮಾನ ಮೂಡಿಸಿದೆ.

ಅಕ್ಟೋಬರ್ 14ರಂದು ನಟಿ ಸಂಗೀತಾ ಭಟ್ ಲೈಂಗಿಕ ದೌರ್ಜನ್ಯದ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಧ್ವನಿ ಎತ್ತಿದ್ದರು. ನಟನೆ ಬಿಡಲು ಲೈಂಗಿಕ ಕಿರುಕುಳವೇ ಕಾರಣ ಎಂದಿದ್ದರು.

ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ನಂತರ ಇಬ್ಬರೂ ಪರಸ್ಪರ ಮೇಸೆಜ್ ಮಾಡುತ್ತಿದ್ದರು. ಸ್ವಲ್ಪ ಸಮಯದ ನಂತರ ಅಶ್ಲೀಲ ಸಂದೇಶ ರವಾನಿಸುತ್ತಿದ್ದರು.

ಒಂದು ದಿನ ಕರೆ ಮಾಡಿ ನೀವು ಇನ್ನೂ ಕನ್ಯೆನಾ ಎಂದು ಕೇಳಿದರು. ನಾನು ಆಘಾತವಾಗಿ ಫೋನ್ ಕಟ್ ಮಾಡಿದೆ. ನಂತರ ಆ ನಟ ಮೆಸೇಜ್ ಮಾಡಿ ನಾನು ಕಳೆದುಕೊಳ್ಳುವುದಕ್ಕೆ ಸಹಾಯ ಮಾಡ್ತಿಯಾ ಅಂದಿದ್ದರು. ಇದಕ್ಕಾಗಿ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಹೋಟೆಲ್ ವೊಂದರಲ್ಲಿ ಭೇಟಿ ಮಾಡುವಂತೆ ಕೆಲವು ಮೆಸೇಜ್ ಮಾಡಿದ್ದರು ಎಂದು ಸಂಗೀತಾ ಭಟ್ ವಿವರಿಸಿದ್ದಾರೆ.

ನಾನು ಆ ನಟನ ಆಹ್ವಾನ ಒಪ್ಪಿಕೊಳ್ಳಲಿಲ್ಲ. ಆದಕ್ಕೆ ಅ ಸ್ಟಾರ್ ನಟ ಎಷ್ಟು ಜನ ನಟಿಯರು ನನ್ನ ಜೊತೆ ಮಲಗಿರಬಹುದು ಅಂತಾ ನಿನಗೆ ಗೊತ್ತಾ ಎಂದು ಪ್ರಶ್ನಿಸಿದ್ದರು. ನಾನು ಬರಿ ಮಿಸ್ ಕಾಲ್ ಕೊಟ್ಟರೇ ಸಾಕು, ಅವರೆಲ್ಲಾರೂ ಓಡೋಡಿ ನನ್ನ ಬಳಿ ಬರ್ತಾರೆ ಎಂದಿದ್ದರು. ನನಗೆ ಅವರ ನಡವಳಿಕೆ ಇಷ್ಟ ಆಗಲಿಲ್ಲ. ನನಗೆ ಬೇರೆ ಸಂಬಂಧ ಇದೆ ಎಂದು ಹೇಳಿ ತಪ್ಪಿಸಿಕೊಂಡೆ ಎಂದು ಸಂಗೀತಾ ಭಟ್ ವಿವರಿಸಿದ್ದಾರೆ.

Next Story

RELATED STORIES