ದುನಿಯಾ ವಿಜಿ ಮನೆಯಲ್ಲಿ ನಾಗರತ್ನ, ಪುತ್ರಿಯಿಂದಲೇ ಹಲ್ಲೆ?

ನಟ ದುನಿಯಾ ವಿಜಿ ಮೇಲಿನ ಹಲ್ಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಮೊದಲ ಪತ್ನಿ ನಾಗರತ್ನ ಹಾಗೂ ಪುತ್ರಿಯೇ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಎರಡನೇ ಪತ್ನಿ ಹಾಗೂ ನಟಿ ಕೀರ್ತಿ ಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 23ರಂದು ಅಡನ್ ಶಾಲೆ ಬಳಿ ಇರುವ ಮನೆಗೆ ಬಂದಿದ್ದ ನಾಗರತ್ನ ಹಾಗೂ ಪುತ್ರಿ, ಕೀರ್ತಿಗೌಡ ಅವರ ಮೇಲೆ ಹಲ್ಲೆ ಮಾಡಿದ್ದೂ ಅಲ್ಲದೇ ಮಾವನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿಗೌಡ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮನೆಯಲ್ಲಿ ತನ್ನ ಗಂಡನ ಸ್ನೇಹಿತರು ಇರುವಾಗ ಏಕಾಏಕಿ ಮನೆ ಪ್ರವೇಶಿಸಿದ ನಾಗರತ್ನ, ಚಪ್ಪಲಿಯಲ್ಲೆ ಹಲ್ಲೆ ಮಾಡಿ ವಿಕೃತ ಮೆರೆದಿದ್ದಾರೆ. ಆದರೆ ನಾಗರತ್ನ ತನ್ನ ಮೇಲೆ ಹಲ್ಲೆ ಆಗಿದೆ ಎಂದು ಪೊಲೀಸರಿಗೆ ಈ ಹಿಂದೆ ದೂರು ನೀಡಿದ್ದರು.
https://www.youtube.com/watch?v=qxbnaUvTLYU
ದುನಿಯಾ ವಿಜಿ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ನಾಗರತ್ನ ಹಲ್ಲೆ ಮಾಡಿರುವ ದೃಶ್ಯಗಳು ಸೆರೆಯಾಗಿದ್ದು, ಕೀರ್ತಿಗೌಡ ಮೇಲೆ ಹಲ್ಲೆ ಮಾಡಲು ಮೊದಲು ಪುತ್ರಿ ಮೋನಿಕಾ ಕುಮ್ಮಕ್ಕು ನೀಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ವಿಚಾರಣೆಗೆ ಪೊಲೀಸರು ಆಗಮಿಸಿದಾಗ ಮನೆಯಲ್ಲೇ ಇದ್ದರೂ ನಾಗರತ್ನ ಇಲ್ಲದಂತೆ ನಾಟಕಮಾಡಿದ್ನಾರೆ. ಗಿರಿನಗರ ಪೊಲೀಸರು ವಿಚಾರಣೆಗೆ ನಾಗರತ್ನ ಮನೆಗೆ ಪದೇಪದೇ ಭೇಟಿ ನೀಡಿದ್ದು, ವಿಚಾರಣೆಗೆ ಸಹಕರಿಸದೇ ಇದ್ದರೂ ಬಂಧಿಸುವ ಸಾಧ್ಯತೆಯು ಇದೆ ಎನ್ನಲಾಗಿದೆ.
ನಾಗರತ್ನವಿರುದ್ಧ 392 (ದರೋಡೆ), 279 (ಕಳ್ಳತನ), 326, 307 (ಕೊಲೆಯತ್ನ), 355 (ಹಲ್ಲೆ), 210 (ಸಾಕ್ಷಿನಾಶ) 6 ಸೆಕ್ಷನ್ ಪ್ರಕಾರ ಪ್ರಕರಣವನ್ನು ಗಿರಿನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ.