6 ತಿಂಗಳ ಮಗು ಜೊತೆಯೇ ಮಹಿಳಾ ಪೊಲೀಸ್ ಕರ್ತವ್ಯ!

ಮಹಿಳಾ ಕಾನ್​ಸ್ಟೇಬಲ್ ಟೇಬಲ್ ಮೇಲೆ 6 ತಿಂಗಳ ಮಗುವನ್ನು ಮಲಗಿಸಿ ಕರ್ತವ್ಯದಲ್ಲಿ ನಿರತವಾಗಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ತಾಯಂದಿರಿಗೆ ಹೆಚ್ಚಿನ ಸೌಲಭ್ಯ ಒದಗಿಸಿಕೊಡಬೇಕು ಎಂಬ ಮಾತುಗಳು ಕೇಳಿ ಬರತೊಡಗಿವೆ.

ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್ ಅರ್ಚನಾ ಜಯಂತ್ ಯಾದವ್ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಟೇಬಲ್ ಮೇಲೆ ಮಗು ಮಲಗಿಸಿ ಕರ್ತವ್ಯ ನಿರ್ವಹಿಸಲಾಗುತ್ತಿದ್ದರೂ ಅಧಿಕಾರಿಗಳು ಸೂಕ್ತ ಸೌಲಭ್ಯ ಕಲ್ಪಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಪೊಲೀಸ್ ತಾಯಂದಿರಿಗಾಗಿ ಹಾಗೂ ಮಕ್ಕಳಿಗಾಗಿ ಬೇಬಿ ಕೇರ್ ಸೌಲಭ್ಯ ಕೊಡಿಸಬೇಕು ಎಂಬ ಒತ್ತಡ ಕೇಳಿ ಬಂದಿದೆ.

ಅರ್ಚನಾ ಜಯಂತ್ ಅವರ ಸೇವೆಯನ್ನು ಗುರುತಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 1000 ರೂ. ನೆರವು ನೀಡಿದ್ದಾರೆ.

ಅರ್ಚನಾ ಹರಿಯಾಣದ ಗುರ್​ಗಾಂವ್ ನಲ್ಲಿರುವ ಕಾರು ತಯಾರಿಸುವ ಕಂಪನಿಯ ಮಾಲೀಕನನ್ನು ವಿವಾಹವಾಗಿದ್ದು, 2 ಮಕ್ಕಳನ್ನು ಪಡೆದಿದ್ದಾರೆ. ಮೊದಲ ಮಗು ಕನಕಗೆ 10 ವರ್ಷ ಆದರೆ ಎರಡನೇ ಮಗು ಅಂಕಿತಾಗೆ ಇನ್ನೂ 6 ತಿಂಗಳು. 2016ರಲ್ಲಿ ಪೊಲೀಸ್ ಹುದ್ದೆಗೆ ಅರ್ಚನಾ ಸೇರಿಕೊಂಡಿದ್ದರು.