Top

ಮಾಧ್ಯಮಗಳ ದುರ್ಬಳಕೆ: ಚುನಾವಣಾ ಆಯೋಗ ಕಳವಳ

ಮಾಧ್ಯಮಗಳ ದುರ್ಬಳಕೆ: ಚುನಾವಣಾ ಆಯೋಗ ಕಳವಳ
X

ಚುನಾವಣೆಯ ವೇಳೆ ಹಣ ಬಲ ಹಾಗೂ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಕಳವಳ ವ್ಯಕ್ತಪಡಿಸಿದೆ.

ದೇಶಾದ್ಯಂತ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಲಿದ್ದು, ತೆಲಂಗಾಣದಲ್ಲಿ ಡಿಸೆಂಬರ್ 7ರಿಂದ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಚುನಾವಣಾ ಮುಖ್ಯ ಆಯುಕ್ತ ಓಂ ಪ್ರಕಾಶ್ ರಾವತ್, ಹಣ ಬಲ ಹಾಗೂ ಅದರ ದುರ್ಬಳಕೆ ಜೊತೆಗೆ ಮಾಧ್ಯಮಗಳ ದುರ್ಬಳಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.

2014ರಲ್ಲಿ ನಡೆದ ಚುನಾವಣೆ ವೇಳೆ 154 ಕೋಟಿಗೂ ಹೆಚ್ಚು ಹಣವನ್ನು ಆಂಧ್ರ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಹಣ ಬಲ ಹಾಗೂ ಮಾಧ್ಯಮಗಳ ದುರ್ಬಳಕೆ ಕುರಿತಂತೆ ರಾಜಕೀಯ ಪಕ್ಷಗಳೂ ಕೂಡ ಕಳವಳ ವ್ಯಕ್ತಪಡಿಸಿವೆ. ಈ ಎರಡೂ ವಿಚಾರಗಳ ಬಗ್ಗೆಯೂ ಆಯೋಗಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರತೀ ಚುನಾವಣೆಯಲ್ಲಿಯೂ ಪ್ರಚಾರದ ವೇಳೆ ಮತದಾರರನ್ನು ಒಲಿಸಿಕೊಳ್ಳಲು ಸೃಜನಾತ್ಮಕ ತಂತ್ರಗಳನ್ನು ಹೂಡುತ್ತಾರೆ. ಹಣದ ದುರ್ಬಳಕೆಯಂತೂ ಅತಿರೇಕಕ್ಕೇರಿದೆ. ಮಾಧ್ಯಮಗಳ ಮಾಲೀಕತ್ವ ರಾಜಕೀಯ ಪಕ್ಷಗಳ ಕೈ ಸೇರಿವೆ. ಹೀಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ಕೆಲ ಮಾಧ್ಯಮಗಳು ರಾಜಕೀಯ ಪಕ್ಷಗಳ ಹಿಡಿತದಲ್ಲಿರುವುದರಿಂದ ಆ ಮಾಧ್ಯಮ ಆಯಾ ವ್ಯಕ್ತಿಗಳ ಪರ ಪ್ರಚಾರ ಮಾಡುತ್ತಿವೆ. ಈ ಬಗ್ಗೆ ಪ್ರಸಕ್ತ ಚುನಾವಣೆ ವೇಳೆ ನಿಗಾ ವಹಿಸಲಾಗುತ್ತಿದೆ ಎಂದು ರಾವತ್ ತಿಳಿಸಿದ್ದಾರೆ.

Next Story

RELATED STORIES