ಕಾರ್ಯಕರ್ತರ ಅಸಮಾಧನದಿಂದ ಬೇಸತ್ತು ಮೈಕ್ ಕಿತ್ತೆಸೆದ ಚಲುವರಾಯಸ್ವಾಮಿ

ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಭಿನ್ನಮತ ಸಭೆಯಲ್ಲಿಯೇ ಸ್ಪೋಟಗೊಂಡಿದ್ದರಿಂದ ಕೋಪಗೊಂಡ ಮಾಜಿ ಸಚಿವ ಚಲುವರಾಯಸ್ವಾಮಿ ಸಭೆಯಲ್ಲಿಯೇ ಮೈಕ್ ಕಿತ್ತೆಸೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ನಾಗಮಂಗಲ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಪರ ಪ್ರಚಾರ ಸಭೆಯಲ್ಲಿ ಈ ಘಟನೆ ನಡೆದಿದೆ.
ಮಾಜಿ ಸಚಿವ ಚಲುವರಾಯಸ್ವಾಮಿ ಮತ್ತು ಶಿವರಾಮೇಗೌಡ ನೇತೃತ್ವದಲ್ಲಿ ಜಂಟಿ ಸಭೆ ನಡೆಯುತ್ತಿದ್ದಾಗ ಕಾರ್ಯಕರ್ತರ ಮಾತಿನಿಂದ ಅಸಮಧಾನಗೊಂಡ ಚಲುವರಾಯಸ್ವಾಮಿ ನೀವು ಸರಿ ಇದ್ದಿದ್ದರೆ ನಮಗೆ ಈ ಗತಿ ಬರುತ್ತಿರಲಿಲ್ಲ ಎಂದು ಮೈಕ್ ಕಿತ್ತೆಸೆದ ಚಲುವರಾಯ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು.
https://www.youtube.com/watch?v=LoQHqOhg7y4
ಇದೇ ವೇಳೆ ಜೆಡಿಎಸ್ ಪಕ್ಷದಿಂದ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಆಗುತ್ತಿರುವ ತೊಂದರೆ ನೆನಪಿಸಿಕೊಂಡರು. ನಮ್ಮ ವಿಚಾರದಲ್ಲಿ ಜೆಡಿಎಸ್ ನಡೆದುಕೊಳ್ಳುತ್ತಿರುವುದು ರಾಜ್ಯದ ಅಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೊತ್ತಿದೆ ಹೀಗಾಗಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ. ಅವರು ಹೇಳಿದ ಮೇಲೂ ನಾವು ಪಾಲಿಸದಿದ್ದರೆ ಸರಿಯಲ್ಲ. ಹಾಗಾಗಿ ನಾಗಮಂಗಲದಿಂದ ಆರಂಭಿಸಿ ಜಿಲ್ಲೆಯ ಏಳೂ ತಾಲೂಕಿನಲ್ಲಿ ಸಭೆ ನಡೆಸುತ್ತೇವೆ ಎಂದರು.
ಪಕ್ಷದ ಆದೇಶದಂತೆ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಿ ಚುನಾವಣೆ ಆದ ನಂತರ ಬದಲಾವಣೆ ಆಗದಿದ್ದಾರೆ ಮುಂದಿನ ಚುನಾವಣೆ ಬಹಳ ದೂರವಿಲ್ಲ. ಆಗ ನಿರ್ಧಾರ ತೆಗೆದುಕೊಳ್ಳೋಣ ಒಮ್ಮೆ ಸಪೋರ್ಟ್ ಮಾಡಿ ಪರಿಸ್ಥಿತಿ ನೋಡೋಣ ಎಂದರು ಹಾಗಗೀ ಸಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇನೆ. ಇದೇ ವೆಳೆ ಸಚಿವ ಪುಟ್ಟರಾಜು ತಮ್ಮ ವಿರುದ್ಧ ನೀಡಿದ್ದ ಹೇಳಿಕೆ ನೆನಪಿಸಿಕೊಂಡ ಚಲುವರಾಯಸ್ವಾಮಿ ಅವರು ಹೇಳಿದ್ದು ಸತ್ಯ ನಮ್ಮ ಜನ ನಮ್ಮನ್ನು ರಕ್ಷಣೆ ಮಾಡಿಕೊಳ್ಳದಿದ್ದಾಗ ಬೇರೆಯವರನ್ನು ಯಾಕೆ ದೂರಬೇಕು ಎಂದು ಮಾತನಾಡಿದರು.
ಕನಕಪುರದಲ್ಲಿ ಡಿಕೆ.ಶಿವಕುಮಾರ್ ಬೇಕು ಅನ್ನುವ ರೀತಿ ನೀವು ನಾಗಮಂಗಲದಲ್ಲಿ ಚಲುವರಾಯಸ್ವಾಮಿ ಬೇಕು ಎಂದು ಹೇಳಬೇಕು ಎಂದರು. ಇನ್ನೂ ಶಿವರಾಮೇಗೌಡ ಅಥವಾ ಕುಮಾರಸ್ವಾಮಿ ಅವರಿಂದ ನಿರೀಕ್ಷೆ ಇಟ್ಟುಕೊಂಡು ಚುನಾವಣೆ ಮಾಡುತ್ತಿಲ್ಲ ಪಕ್ಷ ಹೇಳಿದಂತೆ ಚುನಾವಣೆ ಮಾಡುತ್ತಿದ್ದೇವೆ ಎಂದರು.