ಬಡ್ಡಿ ರಹಿತ ಸಾಲ: ರಾಜ್ಯೋತ್ಸವಕ್ಕೆ ರಾಜ್ಯ ಸರಕಾರದಿಂದ ಬಂಪರ್ ಕೊಡುಗೆ

ಕೂಲಿ ಕಾರ್ಮಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ 1 ಸಾವಿರದಿಂದ 10 ಸಾವಿರ ರೂಪಾಯಿವರೆಗೂ ಬಡ್ಡಿ ರಹಿತ ಸಾಲ ನೀಡುವ ಬಂಪರ್ ಕೊಡುಗೆಯನ್ನು ರಾಜ್ಯ ಸರಕಾರ ನೀಡಲಿದ್ದು, ನವೆಂಬರ್ 1ರ ರಾಜ್ಯೋತ್ಸವದಂದು ಅಧಿಕೃತ ಘೋಷಣೆ ಮಾಡಲಿದೆ.
ಶಿರಾಳಕೊಪ್ಪದಲ್ಲಿ ಭಾನುವಾರ ಬಹಿರಂಗ ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ ಈ ಘೋಷಣೆ ಮಾಡಿದರು.
ರೈತರ ಸಾಲ ಮನ್ನಾ ಬಗ್ಗೆ ನಾನು ಚುನಾವಣೆ ಪೂರ್ವದಲ್ಲಿ ಭರವಸೆ ಕೊಟ್ಟಿದ್ದೆ ಆದರೆ, ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಬರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಸಹಕಾರದೊಂದಿಗೆ 45 ಸಾವಿರ ಸಾಲ ಮನ್ನಾಕ್ಕೆ ಮುಂದಾಗಿದ್ದೇವೆ. 22 ಲಕ್ಷ ರೈತ ಕುಟುಂಬಗಳು ಸಹಕಾರ ಸಂಘದಲ್ಲಿ ಸಾಲ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರೋ ಸಾಲ ತೀರಿಸೋಕೆ ಗ್ರಾಮೀಣ ಬ್ಯಾಂಕ್ ಸೇರಿ 24 ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಲೂ ಮುಂದಾಗಿದೆ ಎಂದರು.
ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಅನಿರೀಕ್ಷಿತವಾಗಿ ಚುನಾವಣೆ ಘೋಷಣೆ ಆಗಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ ಹಾಗಾಗಿ ರಾಜ್ಯದಲ್ಲಿ ಅಂತಿಮವಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾಗಿದೆ ಎಂದರು.
ನನ್ನ ತಂದೆ-ತಾಯಂದಿರಿಗೆ, ಯವಕರಿಗೆ ಕೈಮುಗಿದು ಕೇಳ್ತಿನಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಆಶೀರ್ವಾದ ಮಾಡಬೇಕು ಈ ಚುನಾವಣೆಯಲ್ಲಿ ನೀವು ಮಧು ಅವರನ್ನು ಆಯ್ಕೆ ಮಾಡಿ ಮಧು ಗೆದ್ದರೇ ನಿಮ್ಮ ಮನೆಯ ಅಣ್ಣನೋ-ತಮ್ಮನೋ ಗೆದ್ದಿದ್ದಾರೆ ಅಂದುಕೊಳ್ಳಿ ಎಂದು ಮಾತನಾಡಿದರು.
ಶಿರಾಳಕೊಪ್ಪ ಭಾಗಕ್ಕೆ ನೀರಾವರಿ ಯೋಜನೆ ಜಾರಿಗೆ ತರಲು ಸಿದ್ದತೆ ನಡೆಸಲಾಗಿದೆ. ರೈತರ ಸಮಸ್ಯೆ ನನ್ನ ಗಮನದಲ್ಲಿದೆ ಪ್ರತಿಯೊಂದು ಹಳ್ಳಿಗಳ ಕೆರೆ ತುಂಬಿಸೋಕೆ ಮೈತ್ರಿ ಸರ್ಕಾರ ಬದ್ಧವಾಗಿದೆ ಮಧು ಬಂಗಾರಪ್ಪ ಆಯ್ಕೆಯಾದರೆ ಮುಂದಿನ ಐದು ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿ ಇರತ್ತೆ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ನಾನಾ ತಂತ್ರ ಮಾಡುತ್ತಿದೆ ಅಕ್ರಮ ಹಣದ ಆಮೀಷವೊಡ್ಡಿ ಶಾಸಕರನ್ನ ಖರೀದಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.