Top

ತಾನು ವಿವಾಹಿತೆ ಎಂದು ಹೇಳಿದ ಶೃತಿ ಹರಿಹರನ್..!

ತಾನು ವಿವಾಹಿತೆ ಎಂದು ಹೇಳಿದ ಶೃತಿ ಹರಿಹರನ್..!
X

ಬೆಂಗಳೂರು: ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಪ್ರತಿಯಲ್ಲಿ ತಾನು ವಿವಾಹಿತೆ ಎಂದು ಹೇಳಿಕೊಂಡಿದ್ದಾರೆ. ದೂರಿನ ಪ್ರತಿಯಲ್ಲಿ ಶ್ರೀಮತಿ ಶೃತಿ(ವೈಫ್ ಆಫ್ ರಾಮ್‌ ಕುಮಾರ್) ಎಂದು ಉಲ್ಲೇಖಿಸಿದ್ದಾರೆ.

ಕೇರಳ ಮೂಲದ ರಾಮ್‌ ಕುಮಾರ್ ಶೃತಿ ಹರಿಹರನ್ ಗೆಳೆಯನಾಗಿದ್ದು, ಇವರೊಂದಿಗೆ ವಿವಾಹವಾಗುವುದೆಂದು ಸುದ್ದಿಯಾಗಿತ್ತು. ಆದ್ರೆ ಶೃತಿ ಈಗಾಗಲೇ ರಾಮ್‌ರೊಂದಿಗೆ ವಿವಾಹವಾಗಿದ್ದು, ಇದೀಗ ದೂರಿನ ಪ್ರತಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.

ಅರ್ಜುನ್ ಸರ್ಜಾಗೆ ಬಂಧನದ ಭೀತಿ..!

ತಮ್ಮ ಪರ ವಕೀಲರೊಂದಿಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದ ಶೃತಿ ಹರಿಹರನ್, ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕಂಪ್ಲೇಂಟ್ ನೀಡಿದ್ದಾರೆ.

ಬಾಣಸವಾಡಿಯಲ್ಲಿ ಶೂಟಿಂಗ್ ಮುಗಸಿ, ನಾನು ಮತ್ತು ಅರ್ಜುನ್ ಸರ್ಜಾ ಯುಬಿಸಿಟಿಯ ಪಬ್‌ವೊಂದರಲ್ಲಿ ಊಟಕ್ಕೆ ಹೋಗಿದ್ದೆವು. ಅಲ್ಲಿ ಅರ್ಜುನ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನನ್ನ ಅಂಗಾಗಳನ್ನು ಅಸಭ್ಯ ರೀತಿಯಲ್ಲಿ ಮುಟ್ಟಿದ್ದಾರೆ. ಆಗ ನಾನು ಅವರನ್ನು ತಿರಸ್ಕರಿಸಿ ಆಚೆ ಬಂದೆ. ಅಲ್ಲದೇ ನಾಳೆಯಿಂದ ರಿಹರ್ಸಲ್‌ಗೆ ಬರೋದಿಲ್ಲ ಅಂತಾ ಡೈರೆಕ್ಟರ್‌ಗೆ ಹೇಳಿದ್ದೆ ಎಂದು ಹೇಳಿದ್ದಾರೆ.

ಈ ಕಾರಣಕ್ಕಾಗಿ ಯುಬಿಸಿಟಿ ವ್ಯಾಪ್ತಿಯಲ್ಲಿ ಬರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಶೃತಿ ಹರಿಹರನ್ ದೂರು ದಾಖಲಿಸಿದ್ದಾರೆ.

ಇನ್ನು ಅರ್ಜುನ್ ಸರ್ಜಾ ವಿರುದ್ಧಎಫ್‌ಐಆರ್ ದಾಖಲಾಗಿದ್ದು, ಸರ್ಜಾಗೆ ಬಂಧನದ ಭೀತಿ ಎದುರಾಗಿದ್ದು, ನಿರೀಕ್ಷಣಾ ಜಾಮೀನು ಪಡೆಯಲು ಸರ್ಜಾ ಸಿದ್ದರಾಗಿದ್ದಾರೆ.

Next Story

RELATED STORIES