Top

ಡಿಕೆಶಿ ಬಳಿ ಹಣ ಇದೆ, ನಮ್ಮ ಮಣ್ಣಲ್ಲಿ ಬಂಗಾರ ಇದೆ : ಶ್ರೀರಾಮುಲು

ಡಿಕೆಶಿ ಬಳಿ ಹಣ ಇದೆ, ನಮ್ಮ ಮಣ್ಣಲ್ಲಿ ಬಂಗಾರ ಇದೆ : ಶ್ರೀರಾಮುಲು
X

ಸಚಿವ ಡಿ ಕೆ ಶಿವಕುಮಾರ್ ಬಳಿ ಹಣ ಇರಬಹುದು ನಮ್ಮ ಬಳ್ಳಾರಿ ಮಣ್ಣಿನಲ್ಲಿ ಬಂಗಾರ ಇದೆ ನಿಮ್ಮಂಥವರನ್ನು ಸಾಕಷ್ಟು ಜನರನ್ನು ನೋಡಿದ್ದೇನೆ. ಉಸ್ತುವಾರಿ ಸಚಿವರಾಗಿ ಒಂದೇ ಸಲ ಬಂದಿದ್ದೀರಿ. ನಂತರ ಜನ ಇದ್ದಾರೋ, ಸತ್ತಾರೋ, ನೋಡಿಲ್ಲ ಎಂದು ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಶಾಸಕ ಶ್ರೀರಾಮುಲು ಹೇಳಿದರು.

ಕಾಂಗ್ರೆಸ್‌ ನವರು ನಾನು ಅಭಿವೃದ್ಧಿ ಮಾಡಿಲ್ಲ ಅಂತರೇ. ಹೀಗಾಗಿ ನಾನು ಕಾಂಗ್ರೆಸ್ ನವರಿಗೆ ಸವಾಲ್ ಹಾಕ್ತಿನಿ. ಸಂಡೂರು, ಹೊಸಪೇಟೆ, ಕೂಡ್ಲಿಗಿ, ತೋರಣಗಲ್ಲು, ರಸ್ತೆಗಳನ್ನು ನಾನು ಮತ್ತು ಜನಾರ್ದನ ರೆಡ್ಡಿ ಮಾಡಿದ್ದು, 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಟ ಇದೆ. ನನ್ನ ಮೇಲೆ ಸೋತರೂ ಚಾಮುಂಡಿಯಲ್ಲಿ ಜೆಡಿಎಸ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸೋತರು. ಸಿದ್ದರಾಮಯ್ಯ ಭಾಷೆ ಬಳಸಬೇಕಾದರೆ, ನಾಲಿಗೆ ಹತೋಟಿಯಲ್ಲಿ ಹಿಡಿದು ಮಾತನಾಡಿ ಎಂದರು.

ನನಗೆ 371ಜೆ ಗೊತ್ತಿಲ್ಲ ಅಂತಾರೆ ಸಿದ್ದರಾಮಯ್ಯ. ನಾನು 371ಜೆ ಗೆ ಸಾಕಷ್ಟು ಹೋರಾಟ ಮಾಡಿದ್ದೇನೆ.. ನನ್ನ ವಿರುದ್ಧ 420 ಎಂಬ ಪದ ಬಳಕೆ ಮಾಡಿದ್ದಾರೆ. ನನಗೆ ಸೆಕ್ಷನ್ ಗೊತ್ತಿಲ್ಲ. ಆದರೆ ಅಂಬೇಡ್ಕರ್ ಬರೆದ ಸಂವಿಧಾನ ಗೊತ್ತು ಎಂದು ನುಡಿದರು.

ಶ್ರೀರಾಮುಲು ಬೆಳೆಯಲು ನನ್ನ ಬಳ್ಳಾರಿ ಜಿಲ್ಲೆಯ ಜನರು ಕಾರಣ. ವಾಲ್ಮೀಕಿ ಸಮುದಾಯದ ಜನ ಕೊಟ್ಟ ರೊಟ್ಟಿ ಊಟ ಮಾಡಿದ್ದೇನೆ. ಬಳ್ಳಾರಿ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲ. 60 ಜನ ಶಾಸಕರು ಇಲ್ಲಿ ಬಂದು ಕುಳಿತಾರಾ? ಜಮುಖಂಡಿ, ರಾಮನಗರಲ್ಲಿ ಒಂದಿಷ್ಟು ಜನ ಶಾಸಕರು, ಮಂತ್ರಿಗಳ ತಂಡ ಇಲ್ಲಿ ಬಂದಿದೆ. ಅವರೇನೇ ಮಾಡಿದರು ಬಿಜೆಪಿ ಗೆಲ್ಲುತ್ತೆ ಎಂದರು.

ಕಾಂಗ್ರೆಸ್, ಜೆಡಿಎಸ್ ಏನು ಮಾಡೋಕಾಗೋಲ್ಲ- 2019 ರ ಲೋಕಸಭೆ ಸಾರ್ವತ್ರಿಕ ಚುನಾವಣೆ ನಂತರ ಈ ಸರಕಾರ ಬೀಳುತ್ತದೆ. ಬಿಜೆಪಿ ಸರಕಾರ ಬಂದೆ ಬರುತ್ತದೆ. ಬಿಎಸ್ ವೈ ಸಿಎಂ ಆಗ್ತಾರೆ ಸಮೀಕ್ಷೆಗಳು ಹೇಳುತ್ತಾ ಇವೆ. ಕಾಂಗ್ರೆಸ್ ಸೋಲುತ್ತದೆ ಅಂತ ಹಾಗಾಗಿ ಕಾಂಗ್ರೆಸ್ ನವರು ಹತಾಶರಾಗಿದ್ದಾರೆ ಎಂದು ಹೇಳಿದರು.

Next Story

RELATED STORIES