Top

ನಟಿ ಸಂಜನಾ ಕ್ಷಮೆ ಯಾಚನೆಗೆ ಡೆಡ್‌ಲೈನ್..!

ನಟಿ ಸಂಜನಾ ಕ್ಷಮೆ ಯಾಚನೆಗೆ ಡೆಡ್‌ಲೈನ್..!
X

ನಿರ್ದೆಶಕ ರವಿ ಶ್ರೀ ವತ್ಸ ಹಾಗೂ ನಟಿ ಸಂಜನಾ ನಡುವಿನ ಮೀಟೂ ವಿವಾದ ಮತ್ತಷ್ಟು ಕಾವೇರಿದೆ. ನಟಿ ಸಂಜನಾಗೆ ಕ್ಷಮೆ ಯಾಚಿಸಲು ನೀಡಿದ್ದ ಗಡುವು ಮುಗಿದಿದ್ದು, ಇದೇ ವಿಷಯವಾಗಿ ಇಂದು ನಿರ್ದೇಶಕರ ಸಂಘದಲ್ಲಿ ಮತ್ತೊಂದು ಸಭೆ ಮಾಡಲಾಗಿತ್ತು.

ಕಳೆದ ಕೆಲ ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಮೀಟೂ ಜೋರಾಗಿದ್ದು, ನಟಿ ಸಂಜನಾ ನಿರ್ದೇಶಕ ರವಿ ಶ್ರೀ ವತ್ಸ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಬಗ್ಗೆ ಎರಡು ದಿನಗಳ ಹಿಂದೆಯಷ್ಟೇ ನಿರ್ದೇಶಕರ ಸಂಘದಲ್ಲಿ ಸಭೆ ನಡೆಸಿ ನಟಿ ಸಂಜನಾಗೆ ಕ್ಷಮೆಯಾಚಿಸುವಂತೆ ಆದೇಶಿಸಲಾಗಿತ್ತು. ಇದೀಗ ಸಂಜನಾಗೆ ನೀಡಿದ್ದ ಕಾಲಾವಕಾಶ ಮುಗಿದಿದ್ದು, ಸಂಜನಾ ಇನ್ನೂ ಕ್ಷಮೆಯಾಚಿಸಿಲ್ಲ. ಇಂದು ಸಭೆ ನಡೆಸಿದ ನಿರ್ದೇಶಕರ ಸಂಘ ನಟಿ ಸಂಜನಾ 8ನೇ ತಾರೀಖಿನವರೆಗೂ ಕಾಲಾವಕಾಶ ಕೇಳಿದ್ದಾರೆ.

ನಟಿ ಸಂಜನಾ ಚಿತ್ರೀಕರಣದ ಸಲುವಾಗಿ ಹೊರದೇಶದಲ್ಲಿರುವುದರಿಂದ 8ನೇ ತಾರೀಖಿನವರೆಗೂ ಕಾಲಾವಕಾಶ ಕೇಳಿದ್ದು, ಆ ನಂತರ ನೇರವಾಗಿ ನಿರ್ದೇಶಕರು ಮತ್ತು ಕಲಾವಿದರ ಸಂಘದವರನ್ನು ನೇರವಾಗಿ ಭೇಟಿಮಾಡುವುದಾಗಿ ದೂರವಾಣಿ ಮೂಲಕ ತಿಳಿಸಿದ್ದಾರೆ.

ಇಂದು ನಡೆದ ಸಭೆಯಲ್ಲಿ ನಟಿ ಸಂಜನಾಗೆ ನವೆಂಬರ್ 2 ರವರೆಗೆ ಮಾತ್ರ ಗಡುವು ನೀಡೋದಾಗಿ ತೀರ್ಮಾನಿಸಲಾಗಿದೆ.ಮತ್ತು ಸಂಜನಾ ಬಂದು ಕ್ಷಮೆಯನ್ನು ಕೋರಬೇಕಾಗಿದೆ.2ನೇ ತಾರೀಖು ಬರದೇ ಹೋದರೇ ಮುಂದೆ ಕ್ರಮ ಕೈಗೂೊಳ್ಳೋದಾಗಿ ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

Next Story

RELATED STORIES