ಬಿಎಸ್ಎಫ್ ಯೋಧರಿಂದ ಒಂದಾದ ತಾಯಿ- ಮಗಳು

ದಾವಣಗೆರೆ: ತರಕಾರಿ ತರಲು ಮಾರ್ಕೆಟಿಗೆ ಹೋಗಿದ್ದ ವಯೋವೃದ್ಧೆ , ದೂರದ ಅಸ್ಸಾಂಗೆ ಹೋಗಿ ಕೊನೆಗೆ ಯೋಧರ ಸಹಾಯದಿಂದ ತನ್ನ ಮನೆ ಸೇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೂಲತಃ ಹಾಸನ ಜಿಲ್ಲೆಯ ಮಾದಿಗಾನಹಳ್ಳಿ ಗ್ರಾಮದ ಜಯಮ್ಮ ಎಂಬ ವಯೋವೃದ್ಧೆ, 2016ರ ಡಿಸೆಂಬರ್ ತಿಂಗಳಲ್ಲಿ ತರಕಾರಿ ತರಲು ಹೋಗಿ ಕಳೆದುಹೋಗಿದ್ದರು. ಅಂದಿನಿಂದ ಇವರ ಮಗಳು ಸುನಂದಾ, ತಾಯಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ರು.
ತರಕಾರಿ ಚೀಲದ ಜೊತೆ ಮನೆಯಿಂದ ಹೊರಬಿದ್ದಿದ್ದ ಜಯಮ್ಮ ಬೆಂಗಳೂರು ತಲುಪಿ.. ರೈಲು ಹತ್ತಿ, ದೂರದ ಅಸ್ಸಾಂನ ಕರೀಂಗಂಜ್ನಲ್ಲಿ ಇಳಿದಿದ್ದರು. ನಂತರ ಅಲ್ಲೇ ಇದ್ದು ಭಿಕ್ಷೆ ಬೇಡಿ ಜೀವನ ನಡೆಸಿದ್ದರು.
ಈ ಟೈಮ್ನಲ್ಲಿ ಬಿಎಸ್ಎಫ್ ಯೋಧರ ಕಣ್ಣಿಗೆ ಬಿದ್ದು ವಿಚಾರಿಸಿದ್ದಾರೆ.. ಕನ್ನಡ ಮಾತ್ರ ತಿಳಿದಿದ್ದ ಜಯಮ್ಮಗೆ ಬೇರೆ ಭಾಷೆ ತಿಳಿದಿರಲಿಲ್ಲ.. ಕಡೆಗೆ ಕನ್ನಡ ಗೊತ್ತಿರೋ ಯೋಧನೊಬ್ಬ ಅಜ್ಜಿಯನ್ನ ವಿಚಾರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು..
ಯೋಧರು ಮಾಡಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಹಾಸನ ಮೂಲದ ಸಂತೋಷ್ ಅನ್ನೋರು ಜಯಮ್ಮರನ್ನ ಗುರ್ತಿಸಿ ಮಗಳು ಸುನಂದಳಿಗೆ ವಿಷಯ ತಿಳಿಸಿದ್ದಾರೆ..
ತಾಯಿಯ ವಿಡಿಯೋ ನೋಡಿದ ಪುತ್ರಿ ಅಸ್ಸಾಂನ ಕರೀಂಗಂಜ್ಗೆ ತೆರಳಿದ್ದಾರೆ.. ಒಂದೂವರೆ ವರ್ಷದ ಬಳಿಕ ತಾಯಿಯನ್ನ ನೋಡಿ ಕಣ್ಣೀರಿಟ್ಟ ಸುನಂತಾ BSF ಯೋಧರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಒಟ್ನಲ್ಲಿ ಕಳೆದು ಹೋಗಿದ್ದ ಜಯಮ್ಮ ಇದೀಗ ಮಗಳನ್ನು ಸೇರಿದ್ದು ಸಂತೋಷದಿಂದ ಇದ್ದಾರೆ. ದೇಶ ಕಾಯುವ ಜೊತೆಗೆ ಅಮೂಲ್ಯ ಜೀವಗಳನ್ನು ಒಂದು ಮಾಡುವಲ್ಲಿ ಬಿಎಸ್ ಎಫ್ ಯೋಧರು ಯಶಸ್ವಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..
ಕ್ಯಾಮರಾಪರ್ಸನ್ ಮಂಜುನಾಥ್ ಜೊತೆ ಪ್ರವೀಣ್ ಬಾಡ ಟಿವಿ 5 ದಾವಣಗೆರೆ..