Top

ಲಿಂಗಾಯತ ಧರ್ಮದ ಬಗ್ಗೆ‌ ಯಡಿಯೂರಪ್ಪಗೆ ಎಬಿಸಿಡಿ ಗೊತ್ತಿಲ್ಲ: ಮಾತಾಮಹಾದೇವಿ

ಲಿಂಗಾಯತ ಧರ್ಮದ ಬಗ್ಗೆ‌ ಯಡಿಯೂರಪ್ಪಗೆ ಎಬಿಸಿಡಿ ಗೊತ್ತಿಲ್ಲ: ಮಾತಾಮಹಾದೇವಿ
X

ಲಿಂಗಾಯತ ಧರ್ಮದ ಬಗ್ಗೆ‌ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಎಬಿಸಿಡಿ ಗೊತ್ತಿಲ್ಲ ಎಂದು ಬೀದರ್ ನಲ್ಲಿ ಮಾತಾಮಹಾದೇವಿ ಹೇಳಿದ್ದಾರೆ.

ಬೀದರ್ ನ ಬಸವಕಲ್ಯಾಣದಲ್ಲಿ 17 ನೇ ಕಲ್ಯಾಣ ಪರ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುದ್ದಿಗಾರೊಂದಿಗೆ ಮಾತನಾಡಿದ ಮಾತಾಮಹಾದೇವಿ, ಯಡಿಯೂರಪ್ಪ ಲಿಂಗಾಯತ ಧರ್ಮದವರಾದರೂ ಅವರಿಗೆ ಲಿಂಗಾಯತ ಸಮುದಾಯದ ಬಗ್ಗೆ ಗೌರವ ಇಲ್ಲ. ವಚನ ಸಾಹಿತ್ಯದ ಮರ್ಮವೇ ಗೊತ್ತಿಲ್ಲ. ಯೂಡಿಯೂರಪ್ಪ ಹಾಗೂ ಈಶ್ವರಪ್ಪ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ಏನು ಗೊತ್ತೀಲ್ಲ. ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಇನ್ನು ಯಡಿಯೂರಪ್ಪ ಕೆಲವರೊಂದಿಗೆ ಸೇರಿ ಅಮೀತ್ ಷಾಗೆ ಲಿಂಗಾಯತ ಸಮುದಾಯದ ಬಗ್ಗೆ ಅಪನಂಬಿಕೆ‌ ಮೂಡಿಸುವ ಕೆಲಸವನ್ನ ಉಂಟುಮಾಡುತ್ತಿದ್ದಾರೆ. ಅಷ್ಟೇ ಅಲ್ಲಾ ಸಚಿವ ಡಿಕೆ ಶಿವಕುಮಾರ್ ಮಾತಿನಲ್ಲಿ ರಾಜಕೀಯ ತಂತ್ರ ಅಡಗಿದೆ. ಮತದಾರರನ್ನ ಸೆಳೆಯಲೂ ಈ ರೀತಿ ಹೇಳಿಕೆಯನ್ನು ನೀಡುತ್ತ ಬರುತ್ತೀದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವ ಸಲುವಾಗಿ ಡಿಕೆ ಶಿವಕುಮಾರ್ ಈ ರೀತಿ ಹೇಳುತ್ತಾ ಬರುತ್ತೀದ್ದಾರೆ ಎಂದು ಆರೋಪಿಸಿದರು.

Next Story

RELATED STORIES