Top

ಕಿಚ್ಚನಿಗಷ್ಟೇ ಅಭಿನಂದನೆ ಸಲ್ಲಿಸಿದ ಪ್ರೇಮ್: ಶಿವಣ್ಣ ಫ್ಯಾನ್ಸ್ ಗರಂ

ಕಿಚ್ಚನಿಗಷ್ಟೇ ಅಭಿನಂದನೆ ಸಲ್ಲಿಸಿದ ಪ್ರೇಮ್: ಶಿವಣ್ಣ ಫ್ಯಾನ್ಸ್ ಗರಂ
X

ದಿ ವಿಲನ್ ಸಿನಿಮಾ ಕುರಿತಂತೆ ನಿರ್ದೇಶಕ ಜೋಗಿ ಪ್ರೇಮ್, ಟ್ವೀಟ್ ಮಾಡುವ ಮೂಲಕ ನಟ ಸುದೀಪ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದ್ರೆ ಟ್ವೀಟ್‌ನಲ್ಲಿ ಶಿವರಾಜ್‌ಕುಮಾರ್ ಹೆಸರು ಇಲ್ಲದ ಕಾರಣ ಶಿವಣ್ಣನ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರೇಮ್ ಮಾಡೋ ತಾರತಮ್ಯದ ಬಗ್ಗೆ ಶಿವಣ್ಣನ ಫ್ಯಾನ್ಸ್ ಗರಂ ಆಗಿದ್ದು, ಸುದೀಪ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ನೀವು, ಶಿವಣ್ಣನ ಹೆಸರನ್ನು ಪ್ರಸ್ತಾಪಿಸುವುದನ್ನ ಮರೆತಿದ್ದೀರಾ ಎಂದು ಖಡಕ್ಕಾಗಿ ಪ್ರಶ್ನಿಸಿದ್ದಾರೆ.

ಅಲ್ಲದೇ ತಮ್ಮ ಆರೋಗ್ಯ ಸರಿ ಇಲ್ಲದಿದ್ದರೂ, ನಿಮ್ಮ ಸಲುವಾಗಿ, ದಿ ವಿಲನ್ ಚಿತ್ರತಂಡದ ಗೆಲುವಿಗಾಗಿ ಶಿವಣ್ಣ ಪ್ರಚಾರ ಮಾಡಿದ್ದಾರೆ. ಶಿವಣ್ಣ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ನಾವು ಸುಮ್ಮನಿದ್ದೇವೆ. ಇಲ್ಲದಿದ್ದರೆ ಯಾವತ್ತೋ ಬೀದಿಗಿಳಿಯುತ್ತಿದ್ವಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES