Top

ಅರೆಸ್ಟ್ ಆಗ್ತಾರಾ ಸರ್ಜಾ..? ಮುಂದಿನ ನಡೆ ಏನು.?

ಅರೆಸ್ಟ್ ಆಗ್ತಾರಾ ಸರ್ಜಾ..? ಮುಂದಿನ ನಡೆ ಏನು.?
X

ಶೃತಿ ಹರಿಹರನ್‌, ಅರ್ಜುನ್‌ ಸರ್ಜಾ ವಿರುದ್ಧ ನೀಡಿರುವ ದೂರಿನ ಹಿನ್ನಲೆಯಲ್ಲಿ, ಇದೀಗ ನಟ ಅರ್ಜುನ್‌ ಸರ್ಜಾಗೆ ಬಂಧನದ ಭೀತಿ ಎದುರಾಗಿದೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಪೊಲೀಸರು, ದೂರಿಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಈ ನಡುವೆ, ಬಂಧನದ ಭೀತಿಯಲ್ಲಿರುವ ನಟ ಅರ್ಜುನ್‌ ಸರ್ಜಾ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲ ಮೂಡಿಸಿದ್ದು..? ಅರ್ಜುನ್‌ ಸರ್ಜಾ ಬಂಧನಕ್ಕೆ ಒಳಪಡುತ್ತಾರೋ ಅಥವಾ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಅಂದಹಾಗೇ, ಅರ್ಜುನ್ ಸರ್ಜಾ ಮೇಲಿನ ಆರೋಪ ಸಾಬೀತಾದರೆ ಐಪಿಸಿ 354 ರ ಪ್ರಕಾರ ಮೂರು ವರ್ಷ ಶಿಕ್ಷೆ. 509 ಅಡಿ ಆರೋಪ ಸಾಬೀತಾದರೆ ಎರಡು ವರ್ಷಶಿಕ್ಷೆ ಒಟ್ಟು ಏಳರಿಂದ ಎಂಟು ವರ್ಷ ಶಿಕ್ಷೆಯಾಗುವ ಸಂಭವವಿದೆ.

https://www.youtube.com/watch?v=UVgYwXJRHNE

ಶೃತಿ ಹರಿಹರನ್​ ಕೊಟ್ಟಿರುವ ದೂರಿಗೆ ವಿರುದ್ಧ ಅರ್ಜುನ್​ ಸರ್ಜಾ ಅವರೂ ಕೌಂಟರ್​ ದೂರು ನೀಡುವ ಅವಕಾಶವಿದೆ. ಸದ್ಯ ದೂರು ಕೊಡುವ ಸಿದ್ಧತೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಘಟನಾ ಸ್ಥಳದ ಮಹಜರು ಮತ್ತು ಸಾಕ್ಷಿಗಳ ವಿಚಾರಣೆ ಮುಂದುವರೆದಿದ್ದು, ಅರ್ಜುನ್​ ಸರ್ಜಾಗೆ ಸದ್ಯದಲ್ಲೆ ಕಬ್ಬನ್​ ಪಾರ್ಕ್​ ಪೊಲೀಸರು ನೊಟೀಸ್​ ನೀಡಲಿದ್ದಾರೆ

ಶೃತಿ ಹರಿಹರನ್​ ,2015 ಮತ್ತು 2016 ರರಲ್ಲಿ ಯೂಬಿ ಸಿಟಿ , ಹೆಬ್ಬಾಳ ಸೇರಿ ಹಲವೆಡೆ ತಾನು ಅರ್ಜುನ್​ ಸರ್ಜಾ ರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೀನಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯೂಬಿ ಸಿಟಿಯಲ್ಲಿ ತನ್ನನ್ ಬರ ಸೆಳೆದು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಅಂಶಗಳು ಇವೆ . ಇದಕ್ಕೆ ಬೇಕಾದ ಸಾಂಧರ್ಭಿಕ ಸಾಕ್ಷಿಗಳನ್ನಾಗಿ ಬೋರೇಗೌಡ ಮತ್ತು ಕಿರಣ್​ ಎಂಬ ಇಬ್ಬರ ಹೆಸರನ್ನ ನೀಡಿದ್ದಾರೆ.

ಇನ್ನು ಘಟನೆ ನಡೆದ ಸ್ಥಳದ ಮಹಜರು ಪೂರ್ಣಗೊಂಡ ಬಳಿಕ ಶೃತಿಯವರು ಕೊಟ್ಟಿರುವ ಸಾಂಧರ್ಬಿಕ ಸಾಕ್ಷಿಗಳನ್ನ ವಿಚಾರಣೆ ನಡೆಸಿದ ಬಳಿಕ ಅರ್ಜುನ್​ ಸರ್ಜಾರವನ್ನ ಬಂಧಿಸಬೇಕೋ ಬೇಡವೋ ಎಂಬ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿಪಿ ಸ್ಪಷ್ಟ ಪಡಿಸಿದ್ದಾರೆ

ಇನ್ನೂ ನಟಿ ಶ್ರುತಿ ಹರಿಹರನ್ ಪರ ಇರುವ ವಕೀಲ ಬಾಲನ್ ದೂರಿನಲ್ಲಿ ಲೈಗಿಂಕ ಕಿರುಕುಳ. ಬೆದರಿಕೆ ಕಿರುಕುಳ ಪ್ರಕರಣ ದಾಖಲಗಿದೆ. 354.354a. ಸೆಕ್ಷನ್ ಕೂಡ ಹಾಕಲಾಗಿದೆ. ಇದೊಂದು ಗಂಭೀರ ಪ್ರಕರಣ. ನೊಂದ ಮಹಿಳೆಯ ಹೇಳಿಕೆ ಕೂಡ ಪ್ರಮುಖವಾಗಿರುತ್ತೆ ಸಾಕ್ಷಿಗಳೂ ಬೇಕು ಅಂತನೇ ಏನೂ ಇಲ್ಲ ನೊಂದ ಮಹಿಳೆಯ ಹೇಳಿಕೆನೆ ಸಾಕು ಎಂದು ಶ್ರುತಿ ಪರ ವಕೀಲರಾದ ಅನಂತ್‌ ನಾಯ್ಕ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Next Story

RELATED STORIES