Top

ಟೀಂ ಇಂಡಿಯಾಕ್ಕೆ 284 ರನ್ ಗುರಿ

ಟೀಂ ಇಂಡಿಯಾಕ್ಕೆ 284 ರನ್ ಗುರಿ
X

ಪುಣೆ : ಸ್ಪೋಟಕ ಬ್ಯಾಟ್ಸ್​ಮನ್ ಶಾಯಿ ಹೋಪ್​ (95) ಅವರ ಅರ್ಧ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಟೀಂ ಇಂಡಿಯಾಕ್ಕೆ 284 ರನ್​ಗಳ ಗೆಲುವಿನ ಗುರಿ ನೀಡಿದೆ. ಟೀಂ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರು.

ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಆರಂಭದಲ್ಲೆ ಜಸ್​ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದು ಆಘಾತ ಕೊಟ್ಟರು. ಆಘಾತ ಅನುಭವಿಸಿದ್ದ ವಿಂಡೀಸ್​ಗೆ ಶಾಯಿ ಹೋಪ್ ಅಬ್ಬರದ ಬ್ಯಾಟಿಂಗ್ ಮಾಡಿ ತಂಡವನ್ನ ಆಘಾತದಿಂದ ಪಾರು ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಹೇಟ್ಮರ್ 37, ಕಿರಾನ್ ಪೊವೆಲ್ 4, ಜೆಸನ್ ಹೋಲ್ಡರ್ 32, ಆಶ್ಲೆ ನರ್ಸ್​ 40 ರನ್ ಬಾರಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ನೆರವಾದರು.

95 ರನ್​ ಗಳಿಸಿ ಶತಕದತ್ತ ಮುನ್ನುಗುತ್ತಿದ್ದ ಹೋಪ್​ಗೆ ಯಾರ್ಕರ್​ ಸ್ಪೆಶಲಿಸ್ಟ್ ಬುಮ್ರಾ ಬೌಲ್ಡ್​ ಮಾಡಿ ಪೆವಿಲಿಯನ್​ ದಾರಿ ತೋರಿಸಿದರು. ಕೊನೆಯಲ್ಲಿ ವೆಸ್ಟ್ ಇಂಡೀಸ್ ನಿಗದಿತ ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು.

ಟೀಂ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 4, ಕುಲ್​ದೀಪ್ ಯಾದವ್ 2, ಭುವನೇಶ್ವರ್ ಕುಮಾರ್​, ಖಲೀಲ್​ ಅಹ್ಮದ್ ಮತ್ತು ಯಜುವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದರು.

Next Story

RELATED STORIES